Home News Accident: ಜಾರ್ಖಂಡ್‌ನಲ್ಲಿ ರಸ್ತೆ ಅಪಘಾತ – 18 ಭಕ್ತರ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

Accident: ಜಾರ್ಖಂಡ್‌ನಲ್ಲಿ ರಸ್ತೆ ಅಪಘಾತ – 18 ಭಕ್ತರ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

Hindu neighbor gifts plot of land

Hindu neighbour gifts land to Muslim journalist

Accident: ಜಾರ್ಖಂಡ್‌ನ ದಿಯೋಘರ್‌ನಲ್ಲಿ ಮಂಗಳವಾರ ಬೆಳಿಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ Xನಲ್ಲಿ ಪೋಸ್ಟ್ ಮಾಡಿದ ಪ್ರಕಾರ, “ಕಾವಡ್ ಯಾತ್ರೆಯ ಸಮಯದಲ್ಲಿ ಬಸ್-ಟ್ರಕ್ ನಡುವೆ ಅಪಘಾತ ಸಂಭವಿಸಿ 18 ಭಕ್ತರು ಸಾವನ್ನಪ್ಪಿದ್ದಾರೆ.” ಅಪಘಾತದಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಬಸ್ ಬಿಹಾರ ಮೂಲದ ಕಾವಡ್ ಯಾತ್ರಿಕರನ್ನು ಕರೆದೊಯ್ಯುತ್ತಿತ್ತು.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆಯ ನಂತರ, ಅವರೆಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ದಿಯೋಘರ್ ಏಮ್ಸ್‌ ಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಭಕ್ತರ ಪ್ರಕಾರ, ಶ್ರಾವಣಿ ಜಾತ್ರೆಯ ಮೂರನೇ ಸೋಮವಾರದಂದು ದಿಯೋಘರ್‌ನಲ್ಲಿರುವ ಬಾಬಾ ವೈದ್ಯನಾಥರಿಗೆ ನೀರು ಅರ್ಪಿಸಿದ ನಂತರ ಮಂಗಳವಾರ ಮುಂಜಾನೆ ಅವರೆಲ್ಲರೂ ಬಸ್‌ನಲ್ಲಿ ಬಾಸುಕಿನಾಥಕ್ಕೆ ಹೋಗುತ್ತಿದ್ದರು. ಆ ಸಮಯದಲ್ಲಿ, ನಿಯಂತ್ರಣ ತಪ್ಪಿದ ಟ್ರಕ್ ಮತ್ತು ಬಸ್ ದಾರಿಯಲ್ಲಿ ತೀವ್ರವಾಗಿ ಡಿಕ್ಕಿ ಹೊಡೆದವು. ಡಿಕ್ಕಿ ಎಷ್ಟು ತೀವ್ರವಾಗಿತ್ತೆಂದರೆ ಬಸ್ ತುಂಡು ತುಂಡಾಗಿತ್ತು.

ಘಟನೆಯ ನಂತರ ಸ್ಥಳದಲ್ಲಿ ಸಾಕಷ್ಟು ಗದ್ದಲ ಉಂಟಾಯಿತು. ಸ್ಥಳೀಯ ಜನರು ಮತ್ತು ಪೊಲೀಸರು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರು. ಸದರ್ ಉಪವಿಭಾಗೀಯ ಅಧಿಕಾರಿ ರವಿ ಕುಮಾರ್ ಮಾತನಾಡಿ, ‘ದೇವಘರ್‌ನಿಂದ ಬಾಸುಕಿನಾಥ್‌ಗೆ ಭಕ್ತರನ್ನು ಕರೆದೊಯ್ಯುತ್ತಿದ್ದ 32 ಆಸನಗಳ ಬಸ್ ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದು, ನಂತರ ಸಮತೋಲನ ತಪ್ಪಿ ಇಟ್ಟಿಗೆಗಳಿಗೆ ಡಿಕ್ಕಿ ಹೊಡೆದಿದೆ ಎಂದು ನಮಗೆ ಮಾಹಿತಿ ಸಿಕ್ಕಿತು’ ಎಂದು ಹೇಳಿದರು.

ಇದನ್ನೂ ಓದಿ: Bangalore: ಸಾಮಾಜಿಕ ಜಾಲತಾಣದ ಮೂಲಕ ಉಗ್ರರ ಜೊತೆ ನಿರಂತರ ಸಂಪರ್ಕ: ಬೆಂಗಳೂರಿನಲ್ಲಿ ಶಂಕಿತ ಮಹಿಳೆ ವಶಕ್ಕೆ