Home News Darshan : ರೇಣುಕಾ ಸ್ವಾಮಿ ಕೊಲೆ ಪ್ರಕರಣ – ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ರದ್ದು...

Darshan : ರೇಣುಕಾ ಸ್ವಾಮಿ ಕೊಲೆ ಪ್ರಕರಣ – ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ರದ್ದು ಮಾಡಿದ್ರೆ ಮುಂದೇನು..?

Hindu neighbor gifts plot of land

Hindu neighbour gifts land to Muslim journalist

Darshan: ರೇಣುಕಸ್ವಾಮಿ ಕೊಲೆ ಪ್ರಕರಣದ (Renukaswamy case)ದಲ್ಲಿ ನಟ ದರ್ಶನ್ (Actor darshan), ಪವಿತ್ರಗೌಡ (Pavitra gowda)ಸೇರಿದಂತೆ ಒಟ್ಟು ಏಳು ಆರೋಪಿಗಳಿಗೆ ಬೇಲ್ ಟೆನ್ಷನ್ ಹೆಚ್ಚಾಗಿದೆ. ಈಗಾಗಲೇ ಈ ಕೇಸ್ ನಲ್ಲಿ ಹೈಕೋರ್ಟ್ ನಿಂದ ಬೇಲ್ ಪಡೆದಿದ್ದ ಆರೋಪಿಗಳು ರಿಲ್ಯಾಕ್ಸ್ ಮೂಡ್ ನಲ್ಲಿದ್ದರು. ಆದರೆ ಸುಪ್ರೀಂ ಕೋರ್ಟ್ ಈ ಜಾಮೀನನ್ನು ಪ್ರಶ್ನಿಸಿ ತೀರ್ಪನ್ನು ಕಾಯ್ದಿರಿಸಿದೆ.

ಹೌದು, 17 ಆರೋಪಿಗಳ ಪೈಕಿ 7 ಜನರ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ನಲ್ಲಿ (Supreme court) ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಸುಪ್ರೀಂ ನಲ್ಲಿ ಈ ವಿಚಾರಣೆಯ ವಾದ ಪ್ರತಿವಾದವನ್ನು ಪೀಠ ಆಲಿಸಿದ್ದು ಕೇವಲ ಆದೇಶ ಪ್ರಕಟಿಸುವುದು ಮಾತ್ರ ಬಾಕಿಯಿದೆ. ಒಂದುವೇಳೆ ಈ ಜಾಮೀನು ವಜಾಗೊಂಡ್ರೆ ನಟ ದರ್ಶನ್ ಏಕೆ ಏನಾಗಬಹುದು ಗೊತ್ತಾ?

ಜಾಮೀನು ರದ್ದಾದರೆ ಮುಂದೇನು?

ನಟ ದರ್ಶನ್ ಸದ್ಯ ನ್ಯಾಯಾಲಯದ ಅನುಮತಿ ಪಡೆದೇ ವಿದೇಶದಲ್ಲಿ ಶೂಟಿಂಗ್ ನಲ್ಲಿ ತೊಡಗಿರುವುದರಿಂದ,ಒಂದುವೇಳೆ ಜಾಮೀನು ರದ್ದಾದ್ರೆ ತಾವಾಗಿಯೇ ಬಂದು ಪೊಲೀಸರ ಮುಂದೆ ಶರಣಾಗಲೇಬೇಕು. ಇದಕ್ಕೆ ಸಮಯದ ಮಿತಿಯಿರುತ್ತದೆ. ಅಂದ್ರೆ ಸಾಮಾನ್ಯವಾಗಿ ಜಾಮೀನು ರದ್ದಾದ 24 ರಿಂದ 72 ಗಂಟೆಯಲ್ಲಿ.. ಅಥವಾ ಕೆಲವೊಮ್ಮೆ ಒಂದು ವಾರದೊಳಗೆ ಪೊಲೀಸರು ಅಥವಾ ಕೋರ್ಟ್ ಮುಂದೆ ಶರಣಾಗಬಹುದು.

ಹೀಗೆ ಶರಣಾಗಲು ನಕಾರ ವ್ಯಕ್ತಪಡಿಸಿದ್ರೆ..ಅಥವಾ ವಿಳಂಬ ಮಾಡಿದ್ರೆ ಆಗ ಪೋಲೀಸರೇ ಆರೋಪಿಗಳನ್ನು ಹುಡುಕಿ ಬಂಧಿಸಿ ಕರೆತರುತ್ತಾರೆ.ಹೀಗಾಗಿ ಅದಕ್ಕೆ ಆರೋಪಿಗಳು ಸಾಮಾನ್ಯವಾಗಿ ಅವಶಕ ಮಾಡಿಕೊಡಲ್ಲ.ಇನ್ನು ದರ್ಶನ್ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.ಆದ್ರೆ ಈ ಹಿಂದಿನಂತೆಯೇ ಜೈಲಿನಲ್ಲಿ ಇದ್ದುಕೊಂಡೇ ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Tomato Price Hike: ದಿಢೀರ್ ಏರಿಕೆ ಕಂಡ ಟೊಮೆಟೋ ಬೆಲೆ – 1 ಕೆಜಿಗೆ 100 ರೂ !!