Home News Elephant Attack: ಮಡಿಕೇರಿ ಸುತ್ತಮುತ್ತ ನಿಲ್ಲದ ಕಾಡಾನೆಗಳ ಪುಂಡಾಟ – ಚೆಂಬು ಗ್ರಾಮದಲ್ಲಿ ಆನೆಗಳ ದಾಂಧಲೆ...

Elephant Attack: ಮಡಿಕೇರಿ ಸುತ್ತಮುತ್ತ ನಿಲ್ಲದ ಕಾಡಾನೆಗಳ ಪುಂಡಾಟ – ಚೆಂಬು ಗ್ರಾಮದಲ್ಲಿ ಆನೆಗಳ ದಾಂಧಲೆ – ಹೈರಾಣದ ಗ್ರಾಮಸ್ಥರು

Hindu neighbor gifts plot of land

Hindu neighbour gifts land to Muslim journalist

Elephant Attack: ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶವಾದ ಚೆಂಬು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಳೆದ ಕೆಲವು ತಿಂಗಳಿನಿಂದ ಚೆಂಬು ಗ್ರಾಮದ ಸುತ್ತಮುತ್ತಲಿನ ಊರುಗಳಾದ ಊರುಬೈಲು, ದಬ್ಬಡ್ಕ, ಆನೆಹಳ್ಳ, ಕಾಂತು ಬೈಲು ಭಾಗದಲ್ಲಿ ನಿರಂತರವಾಗಿ ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿದ್ದು ಅಡಿಕೆ, ಬಾಳೆ, ತೆಂಗು, ಗೇರು ಹೀಗೆ ಫಸಲು ನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಮತ್ತೊಂದೆಡೆ ಸಾರ್ವಜನಿಕರು ಓಡಾಡುವ ರಸ್ತೆಯಲ್ಲೇ ಆನೆಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳು, ಕಾರ್ಮಿಕರು ಪ್ರಾಣ ಕೈನಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಆನೆಗಳಿಂದ ಯಾವುದೇ ಅನಾಹುತ ಸಂಭವಿಸುವ ಮೊದ್ಲು ಆದಷ್ಟು ಬೇಗ ಆನೆಗಳನ್ನು ಕಾಡಿಗೆ ಅಟ್ಟಬೇಕು ಮತ್ತು ಕೃಷಿಯಿಂದ ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರ ಹೊಂದಿಸಬೇಕು ಎಂದು ಸ್ಥಳೀಯ ಶಾಸಕ ಎ. ಎಸ್. ಪೊನ್ನಣ್ಣರಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Harihara Veera Mallu: ಮುಖಕ್ಕೆ ಕೆಂಪು ಪರದೆ ಹಾಕೊಂಡು ‘ಹರಿ ಹರ ವೀರ ಮಲ್ಲು’ ಸಿನಿಮಾ ನೋಡಿದ ಮಹಿಳೆಯರು- ಕಾರಣವೇನು?