Accident: ದೇವರಕೊಲ್ಲಿ ಬಳಿ ಭೀಕರ ಅಪಘಾತ : ಗೋಣಿಕೊಪ್ಪದ ನಾಲ್ವರು ಯುವಕರು ಸಾ*ವು

Accident: ಕಾರು- ಲಾರಿ ಮಧ್ಯೆ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಪ್ರಯಾಣಿಕರ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಅವರನ್ನು ಆಸ್ಪತ್ರೆ ದಾಖಲು. ಮಾಡಲಾಗಿತ್ತು. ಆದರೆ ಈದೀಗ ಬಂದ ಮಾಹಿತಿ ಪ್ರಕಾರ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಹೆದ್ದಾರಿ275 ರಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೋಣಿಕೊಪ್ಪಲಿನ ಮಾರುಕಟ್ಟೆ ರಸ್ತೆಯ ನಿವಾಸಿಗಳಾದ ನಿಹಾದ್, ರಿಸ್ವಾನ್, ರಾಕಿಬ್ ಹಾಗೂ ರೀಶು ಮೃತ ದುರ್ದೈವಿಗಳು. ಮಡಿಕೇರಿ ತಾಲೂಕಿನ ದೇವರ ಕೊಲ್ಲಿ ಬಳಿ ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಗೋಣಿಕೊಪ್ಪದ ನಾಲ್ವರು ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಸುಳ್ಯದ ಆಸ್ಪತ್ರೆಯಲ್ಲಿ ಇಡಲಾಗಿದೆ.
ಮಧ್ಯಾಹ್ನ 12.50 ಗಂಟೆ ಸುಮಾರಿನಲ್ಲಿ ಮಡಿಕೇರಿಯಿಂದ ಸುಳ್ಯದ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಹಾಗೂ ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಲಾರಿಯ ನಡುವೆ ಡಿಕ್ಕಿ ಸಂಭವಿಸಿದೆ. ಸಂಪಾಜೆಯ ಶರತ್ ಕೀಲಾರು, ತಾಜುದ್ದೀನ್ ಸೇರಿದಂತೆ ಯುವಕರ ತಂಡ ನಾಲ್ಕು ಆಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟೊತ್ತಿಗಾಗಲೇ ನಾಲ್ವರೂ ಮೃತಪಟ್ಟಿದ್ದಾರೆ.
Comments are closed.