World News: 50 ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನ ಪತನ, ನಾಪತ್ತೆ ನಂತರ ಅವಶೇಷಗಳು ಪತ್ತೆ

World News: ಗುರುವಾರ (ಇಂದು) (ಜುಲೈ 24) ರಷ್ಯಾದ ಪ್ರಯಾಣಿಕ ವಿಮಾನವೊಂದು ನಾಪತ್ತೆಯಾಗಿದ್ದು, ಆದರೆ ಈಗ ವಿಮಾನ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಬಂದಿದೆ. ರಾಯಿಟರ್ಸ್ ವರದಿಯ ಪ್ರಕಾರ, ಈ ಪ್ರಯಾಣಿಕ ವಿಮಾನದಲ್ಲಿ 50 ಜನರಿದ್ದರು. ಅಂಗಾರ ಏರ್ಲೈನ್ಸ್ ವಿಮಾನವು ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ನಗರದ ಕಡೆಗೆ ಹೋಗುತ್ತಿತ್ತು. ಆದರೆ ಮಧ್ಯದಲ್ಲಿ ಅದು ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕ ಕಳೆದುಕೊಂಡಿತು. ಈಗ ರಷ್ಯಾದ ಮಾಧ್ಯಮಗಳು ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಿಕೊಂಡಿವೆ.

ರಷ್ಯಾದ ಸುದ್ದಿ ಸಂಸ್ಥೆ ಇಂಟರ್‌ಫ್ಯಾಕ್ಸ್‌ನ ವರದಿಯ ಪ್ರಕಾರ, ರಷ್ಯಾದ ಆನ್ -24 ಪ್ರಯಾಣಿಕ ವಿಮಾನವು ಟಿಂಡಾ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನ ಪಟ್ಟಿದ್ದು ಆದರೆ ವಿಫಲಗೊಂಡಿದೆ. ನಂತರ ಎರಡನೇ ಪ್ರಯತ್ನಕ್ಕಾಗಿ ಆಕಾಶದಲ್ಲಿ ಸುತ್ತು ಹಾಕುತ್ತಿದ್ದು ನಂತರ ನಾಪತ್ತೆಯಾಗಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿ ಐದು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ.
ಟಿಂಡಾ ವಿಮಾನ ನಿಲ್ದಾಣದ ಅಧಿಕಾರಿಗಳು ಪೈಲಟ್ ಎರಡನೇ ಬಾರಿಗೆ ಲ್ಯಾಂಡ್ ಮಾಡಲು ಪ್ರಯತ್ನಿಸುತ್ತಿದ್ದರು, ಆದರೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಅಂಗಾರ ಏರ್ಲೈನ್ಸ್ ನ ಈ ವಿಮಾನವು ರಾಡಾರ್ ನಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕ ಕಡಿತಗೊಂಡ ಕೆಲವೇ ನಿಮಿಷಗಳಲ್ಲಿ ರಕ್ಷಣಾ ತಂಡಗಳು ವಿಮಾನ ಅಪಘಾತದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿವೆ ಎಂದು ಪ್ರಾದೇಶಿಕ ತುರ್ತು ಸಚಿವಾಲಯ ತಿಳಿಸಿದೆ.
Comments are closed.