Bhagamandala: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಶ್ರದ್ದಾಭಕ್ತಿಯಿಂದ ಜರುಗಿದ ಪೊಲಿಂಕಾನ ಉತ್ಸವ – ನೆರೆದ ಸಾವಿರಾರು ಭಕ್ತರು

Bhagamandala: ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ ವಿಶ್ವಾವಸು ಸಂವತ್ಸರದ ಗ್ರೀಷ್ಮ ಋತುವಿನ ದಕ್ಷಿಣಾಯನ ಕರ್ಕಾಟಕ ಮಾಸ ಆಪಾಢ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಜುಲೈ, 24 ರಂದು ಮಧ್ಯಾಹ್ನ 12 ಗಂಟೆಗೆ ಮಹಾ ಪೂಜೆಯ ನಂತರ ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವ ನಡೆಯಿತು.

ಭಾಗಮಂಡಲ ಶ್ರೀ ಭಗoಡೇಶ್ವರ ಸನ್ನಿಧಿಯಲ್ಲಿ ಶ್ರದ್ದಾ ಭಕ್ತಿಯಿಂದ “ಪೊಲಿಂಕಾನ ಉತ್ಸವ” ವಿಶೇಷ ಪೂಜೆ ಕೈoಕರ್ಯದೊಂದಿಗೆ ನೆರವೇರಿಸಲಾಯಿತು. ಮಹಾಗಣಪತಿ, ಮಹಾ ವಿಷ್ಣು, ಸುಬ್ರಮಣ್ಯ, ಭಗoಡೇಶ್ವರ ಗುಡಿಗಳಿಗೆ ಪೂಜೆ ಸಲ್ಲಿಸಲಾಯ್ತು. ಬಳಿಕ ಬಾಳೆ ದಿಂಡು ನಿಂದ ಸಿದ್ದಗೊಂಡ ಸುಮಂಗಲಿ ಮಂಟಪಕ್ಕೆ ದೇವಾಲಯದ ಪ್ರದಕ್ಷಿಣೆ ಬಂದ ನಂತರ ದೀಪ ಬೆಳಗಿ, ಮುತೈದೆ ಆಭರಣ ಗಳಾದ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿ ತಟ್ಟೆ ಸೇರಿದಂತೆ ಹೂವು ಹಣ್ಣುಗಳಿಂದ ಅಲಂಕರಿಸಿ ಮತ್ತೆ ಪ್ರದಕ್ಷಿಣೆ ಹಾಕಲಾಯ್ತು.
ನಂತರ ಮುಖ್ಯ ದ್ವಾರದ ಮೂಲಕ ನೂರಾರು ಭಕ್ತರ ಸಮ್ಮುಖದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಕಾವೇರಿ ಕನ್ನಿಕೆ, ಸುಜ್ಯೋತಿ ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ, ಕಾವೇರಿ ಶಾಂತಳಾಗಿ, ಮಳೆಗಾಲದಲ್ಲಿ ಯಾವುದೇ ಹಾನಿ ಮಾಡದೇ ರೈತರಿಗೆ ಸುಬಿಕ್ಷ ವಾಗಲಿ ಎಂದು ಪೂಜೆ ಸಲ್ಲಿಸಿ ಮಂಟಪವನ್ನು ನದಿಯಲ್ಲಿ ತೇಲಿ ಬಿಡಲಾಯಿತು. ಈ ವೇಳೆ ತಲಕಾವೇರಿ – ಭಾಗಮಂಡಲ ದೇವಾಲಯ ಆಡಳಿತ ಮಂಡಳಿ ಮುಖ್ಯಸ್ಥರು, ತಲಕಾವೇರಿ ಹಾಗೂ ಭಾಗಮಂಡಲ ತಕ್ಕ ಮುಖ್ಯಸ್ಥರು ಪ್ರಧಾನ ಅರ್ಚಕರು, ಸ್ಥಳೀಯ ಭಕ್ತರು ಹಾಜರಿದ್ದರು.
ಇದನ್ನೂ ಓದಿ:Rupee-Dollar: ಅಮೆರಿಕ ಡಾಲರ್ ಎದುರು ಏರಿದ ರೂಪಾಯಿ ಮೌಲ್ಯ – ಹಾಗಾದರೆ ಎಷ್ಟು ಪೈಸೆ ಏರಿಕೆ ಕಂಡಿತು?
Comments are closed.