Byrathi Suresh: ಸಚಿವ ಬೈರತಿ ಸುರೇಶ್‌ ಪಿಎಸ್‌ ಮನೆ ಮೇಲೆ ʼಲೋಕಾʼ ದಾಳಿ

Share the Article

Byrathi Suresh: ಸಚಿವ ಭೈರತಿ ಸುರೇಶ್‌ ಪಿಎಸ್‌ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ಆಸ್ತಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ.

ಬುಧವಾರ ಮಧ್ಯಾಹ್ನ ಮಾರುತಿ ಬಗಲಿ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿಯ ವೇಳೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, 8 ನಿವೇಶನಗಳು, 5 ವಾಸ ಮನೆ, 19 ಎಕರೆ ಜಮೀನಿನ ಆಸ್ತಿ ಪತ್ರಗಳನ್ನು ವಶಪಡಿಸಲಾಗಿದೆ ಎಂದು ವರದಿಯಾಗಿದೆ.

ಮಾರುತಿ ಬಗಲಿ ಎರಡು ವರ್ಷಗಳ ಕಾಲ ಸಚಿವ ಭೈರತಿ ಸುರೇಶ್‌ ಅವರ ವೈಯಕ್ತಿಕ ಕಾರ್ಯದರ್ಶಿ ಆಗಿದ್ದರು. ಮೂರು ತಿಂಗಳ ಹಿಂದೆ ಇವರು ಕೆಲಸ ಬಿಟ್ಟಿದ್ದರು.

Comments are closed.