Bengaluru: ರಿಸರ್ವ್ ಬ್ಯಾಂಕ್‌ನಿಂದ ಲಕ್ಷ ಲಕ್ಷ ನಾಣ್ಯ ಸಾಗಿಸುತ್ತಿದ್ದ ಲಾರಿ ನೆಲಮಂಗಲ ಹೆದ್ದಾರಿ ಬಳಿ ಪಲ್ಟಿ!

Share the Article

Bengaluru: ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ (Reserve Bank Of India – RBI) ಲಕ್ಷ ಲಕ್ಷ ನಾಣ್ಯಗಳನ್ನು ತುಂಬಿಕೊಂಡು ರಾಯಚೂರಿಗೆ ಸರಬರಾಜು ಮಾಡುತ್ತಿದ್ದ ಲಾರಿಯೊಂದು ನೆಲಮಂಗಲ ತಾಲೂಕಿನ ರಾಯರಪಾಳ್ಯ ಗೇಟಿನ ಬಳಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಲಕ್ಷ, ಲಕ್ಷ ಮೌಲ್ಯದ ನಾಣ್ಯಗಳು ರಸ್ತೆಯ ಬದಿಗೆ ಬಿದ್ದಿದ್ದು, ಈ ಘಟನೆಯಲ್ಲಿ ಲಾರಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇನ್ನು ಲಾರಿಯನ್ನು ಭದ್ರವಾಗಿ ಮುಚ್ಚಿದ್ದರಿಂದ ಲಾರಿಯೊಳಗಿನ ನಾಣ್ಯಗಳು ಹೊರಗೆ ಬಿದ್ದಿರಲಿಲ್ಲ.

ಬೆಂಗಳೂರಿನಲ್ಲಿರುವ ರಿಸರ್ವ್ ಬ್ಯಾಂಕ್‌ನ ಶಾಖೆಯಿಂದ ಒಂದು ಹಾಗೂ ಎರಡು ರೂಪಾಯಿ ಮುಖಬೆಲೆಯ 57 ಲಕ್ಷ ರೂ. ಮೌಲ್ಯದ ನಾಣ್ಯಗಳನ್ನು ತುಂಬಿಕೊಂಡ ಲಾರಿ ರಾಯಚೂರು ಕಡೆಗೆ ಸಾಗುತ್ತಿತ್ತು. ಲಾರಿಯಲ್ಲಿದ್ದ ನಾಣ್ಯಗಳನ್ನು ಮೂಟೆಯಲ್ಲಿ ಡಬಲ್ ಪ್ಯಾಕಿಂಗ್ ಮಾಡಲಾಗಿದ್ದು, ಯಾವುದೇ ನಾಣ್ಯಗಳು ಸೋರಿಕೆ ಆಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅಪಘಾತವಾದ ಸ್ಥಳಕ್ಕೆ ತಕ್ಷಣವೇ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆ ಎತ್ತುವ ಕಾರ್ಯ ಯಶಸ್ವಿಯಾಗಿ ನಡೆಸಿದ್ದಾರೆ. ಪ್ರಸ್ತುತ ಲಾರಿಯಲ್ಲಿದ್ದ ನಾಣ್ಯಗಳು ಸುರಕ್ಷಿತವಾಗಿದೆಯೇ ಅಥವಾ ನಷ್ಟವಾಗಿದೆ ಎಂಬ ನಿಖರವಾದ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಆದರೆ, ರಾತ್ರಿ ವೇಳೆಯೇ ಬ್ಯಾಂಕಿನ ಅಧಿಕಾರಿಗಳು ಬಂದು ಎಲ್ಲ ನಾಣ್ಯಗಳನ್ನು ಇನ್ನೊಂದು ಲಾರಿಗೆ ವರ್ಗಾವಣೆ ಮಾಡಿಕೊಂಡು ಅಲ್ಲಿಂದ ಭದ್ರತೆಯಲ್ಲಿಯೇ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Tanushree Dutta:‌ ತನುಶ್ರೀ ದತ್ತ ನಟಿಗೆ ಮನೆಯವರಿಂದಲೇ ಕಿರುಕುಳ: ವಿಡಿಯೋ ವೈರಲ್

Comments are closed.