Home News Crime News: ತನ್ನದೇ ಕುಟುಂಬದ 8 ಮಂದಿಯನ್ನು ಹ*ತ್ಯೆ ಮಾಡಲು ಗೋಧಿ ಹಿಟ್ಟಿಗೆ ವಿಷ ಬೆರೆಸಿದ...

Crime News: ತನ್ನದೇ ಕುಟುಂಬದ 8 ಮಂದಿಯನ್ನು ಹ*ತ್ಯೆ ಮಾಡಲು ಗೋಧಿ ಹಿಟ್ಟಿಗೆ ವಿಷ ಬೆರೆಸಿದ ಮಹಿಳೆ

Hindu neighbor gifts plot of land

Hindu neighbour gifts land to Muslim journalist

Crime News: ತನ್ನದೇ ಕುಟುಂಬದ 8 ಸದಸ್ಯರನ್ನು ಕೊಲ್ಲಲು ಮಹಿಳೆಯೊಬ್ಬಳು ಗೋಧಿ ಹಿಟ್ಟಿನಲ್ಲಿ ವಿಷ ಬೆರೆಸಿದ್ದ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಈ ಘಟನೆ ನಡೆದಿದೆ. ಗೋಧಿ ಹಿಟ್ಟಿಗೆ ಸಲ್ಫೋಸ್‌ ಬೆರೆಸಿ ತಂದೆ ಜೊತೆಗೆ ಸೇರಿ ಈ ಕೃತ್ಯ ಮಾಡಿದ್ದಳು.

ಸಕಾಲದಲ್ಲಿ ಈ ಸಂಚು ಬಯಲಾಗಿದ್ದು, ಎಲ್ಲರ ಜೀವ ಉಳಿದಿದೆ. ಪೊಲೀಸರು ಮಹಿಲೆ ಮತ್ತು ಆಕೆಯ ತಂದೆಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮಲಕಿಯಾ ಬಾಜಾ ಖುರ್ರಂ ಗ್ರಾಮದಲ್ಲಿ ಬ್ರಿಜೇಶ್‌ ಕುಮಾರ್‌ ಅವರ ಪತ್ನಿ ಮಾಲತಿದೇವಿ ಎಂಬಾಕೆ ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ತಂದೆ ಜೊತೆ ಸೇರಿ ಈ ಪ್ಲ್ಯಾನ್‌ ಮಾಡಿದ್ದಳು.

ಮಾಲತಿ ತನ್ನ ಅತ್ತಿಗೆ ಮಂಜು ದೇವಿ ಜೊತೆ ನಡೆಯುತ್ತಿದ್ದ ನಿರಂತರ ಜಗಳದಿಂದ ಬೇಸರಗೊಂಡು, ಇಡೀ ಕುಟುಂಬವನ್ನೇ ನಾಶ ಮಾಡಲು ಹೋಗಿದ್ದಳು. ಮಂಜುದೇವಿ ಆಹಾರ ಸಿದ್ಧಪಡಿಸಲು ಹೋದಾಗ ಗೋಧಿ ಹಿಟ್ಟಿನಿಂದ ಕೆಟ್ಟ ವಾಸನೆ ಬರುವುದು ಕಂಡ ಬಂದಿದ್ದು, ನಂತರ ನಿಜ ವಿಷಯ ಬಯಲಿಗೆ ಬಂದಿದೆ. ಕೂಡಲೇ ಕುಟುಂಬದ ಎಲ್ಲರಿಗೂ ವಿಷಯ ತಿಳಿಸಿದ್ದು, ವಿಚಾರಣೆ ಸಮಯದಲ್ಲಿ ಸಲ್ಫೋಸ್‌ ಮಿಶ್ರಣ ಮಾಡಿರುವುದು ಹೌದು ಎಂದು ಹೇಳಿದ್ದಾಳೆ.

ಇದನ್ನೂ ಓದಿ: Parliament: ರೈತರ ಕೃಷಿ ಸಾಲ ಮನ್ನಾ? ಸಂಸತ್ತಿನಲ್ಲಿ ಸರ್ಕಾರದಿಂದ ಮಹತ್ವದ ಹೇಳಿಕೆ