Railway: ರೈಲ್ವೆ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಆದೇಶ!

Share the Article

Railway: ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ರೈಲ್ವೆಯ (Railway) ಎಲ್ಲ 74,000 ಬೋಗಿಗಳು ಮತ್ತು ಎಂಜಿನ್‌ನಲ್ಲಿ ಲೋಕೋಪೈಲಟ್‌ಗಳು ಇರುವಂತಹ 15,000 ಸ್ಥಳಗಳಲ್ಲಿ (ಲೋಕೋಮೋಟಿವ್‌) ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಆದೇಶಿಸಿದ್ದಾರೆ.

ಪ್ರತಿ ರೈಲ್ವೆ ಕೋಚ್‌ನಲ್ಲಿ ನಾಲ್ಕು ಉತ್ತಮ ಗುಣಮಟ್ಟದ ಸಿ.ಸಿ.ಟಿ.ವಿ ಕ್ಯಾಮೆರಾಗಳು (ಪ್ರತಿ ಪ್ರವೇಶ ದ್ವಾರದ ಬಳಿ ಎರಡು) ಹಾಗೂ ಪ್ರತಿ ‘ಲೋಕೋಮೋಟಿವ್‌’ಗಳಲ್ಲಿ ಅದೇ ರೀತಿಯ ಆರು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದು ‘ಲೋಕೋಮೋಟಿವ್‌’ನ ಮುಂಭಾಗ, ಹಿಂಭಾಗ ಮತ್ತು ಎರಡೂ ಬದಿಗಳ ದೃಶ್ಯಗಳನ್ನು ಸೆರೆಹಿಡಿಯುತ್ತದೆ ಎಂದು ಅದು ಹೇಳಿದೆ.

ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವುದರ ಜತೆಗೆ ನಿಲ್ದಾಣಗಳು ಮತ್ತು ರೈಲುಗಳ ಸುತ್ತಮುತ್ತ ಕಿಡಿಗೇಡಿಗಳು ದುಷ್ಕೃತ್ಯ ನಡೆಸುವುದನ್ನು ತಡೆಯಲು ಈ ಕ್ರಮ ನೆರವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Bhatkala: ಭಟ್ಕಳ ನಗರ ಸ್ಪೋಟಕ್ಕೆ ಬೆದರಿಕೆ ಸಂದೇಶ: ಆರೋಪಿ ಅರೆಸ್ಟ್!

Comments are closed.