Karwar: ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ ವೈದ್ಯಕೀಯ ಅಧೀಕ್ಷಕ

Karwar: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಕಾರವಾರದ ವೈದ್ಯಕೀಯ ಅಧೀಕ್ಷಕ ಶಿವಾನಂದ ಕುಡ್ತಾಲಕರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಇಂದು (ಗುರುವಾರ) ಮಧ್ಯಾಹ್ನ ನಡೆದಿದೆ.

ಮೂರು ಲಕ್ಷದ ಐವತ್ತು ಸಾವಿರ ಮೌಲ್ಯದ ಹಾಸಿಗೆ, ಬೆಡ್‌ಗಳನ್ನು ಕ್ರಿಮ್ಸ್ ವೈದ್ಯಕೀಯ ಆಸ್ಪತ್ರೆಗೆ ಸರಬರಾಜು ಮಾಡಲು ಎಂಟು ತಿಂಗಳ ಹಿಂದೆ ಟೆಂಡರ್ ಪಡೆದಿರುವ ವಿಶಾಲ್ ಫರ್ನೀಚರ್‌ನ ಮೌಸೀನ್ ಅಹ್ಮದ್ ಶೇಕ್ ಬಳಿ ಹಣ ಬಿಡುಗಡೆ ಮಾಡಲು 50ಸಾವಿರವನ್ನು ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಾಲಕರ್ ಲಂಚ ಕೇಳಿರುವ ಘಟನೆ ನಡೆದಿದೆ.
2014 ರಲ್ಲಿ 16 ಲಕ್ಷದ ಟೆಂಡರ್ ನೀಡಿದ್ದು, ಇದಕ್ಕೆ ಐದೂವರೆ ಲಕ್ಷ ಲಂಚ ನೀಡಿದ್ದರು. ಇದೀಗ ಮತ್ತೆ ಲಂಚ ಕೇಳಿದ್ದು, ಮೊನ್ನೆ ರಾತ್ರಿ 20000 ಹಣ ಪಡೆದಿದ್ದು, ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಾಲಕರ್ ಇಂದು ಮತ್ತೆ 30000ರೂ. ಪಡೆಯುತ್ತಿರುವ ವೇಳೆ ಲೋಕಾಯುಕ್ತ ಎಸ್.ಪಿ ಕುಮಾರ್ ಚಂದ್ರ ನೇತೃತ್ವದ ಮಂಗಳೂರು ಮೂಲದ ತಂಡ ದಾಳಿ ಮಾಡಿ ಹಣದ ಸಮೇತ ಅವರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
Comments are closed.