D K Shivkumar : ಸಿದ್ದರಾಮಯ್ಯ ಎರಡೂವರೆ ವರ್ಷ ಪೂರೈಸಿದ ಬಳಿಕ ನೀವು CM ಆಗ್ತೀರಾ ? ದೆಹಲಿಯಲ್ಲಿ ವಿಚಿತ್ರ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್

D K Shivkumar : ರಾಜ್ಯದಲ್ಲಿ ಆಗಾಗ ಚರ್ಚೆಗೆ ಬರುವ ಸಿಎಂ ಬದಲಾವಣೆ ಗೊಂದಲಕ್ಕೆ ಕೆಲವು ದಿನಗಳ ಹಿಂದೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಹೀಗಾಗಿ ನಾನೇ ಮುಂದಿನ 5 ವರ್ಷ ಸಿಎಂ ” ಎಂದು ಸಿದ್ದರಾಮಯ್ಯ ಅವರು ಬಹಿರಂಗವಾಗಿ ಘೋಷಣೆ ಮಾಡಿದ್ದರು. ಇತ್ತ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಅಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿ “ನನ್ನ ಮುಂದೆ ಬೇರೆ ಆಯ್ಕೆ ಇಲ್ಲ, ಬೆಂಬಲ ನೀಡುತ್ತೇನೆ ” ಎಂದು ಹೇಳಿ ಸಿಎಂ ಸ್ಥಾನದಿಂದ ಸದ್ಯಕ್ಕೆ ಹಿಂದಕ್ಕೆ ಸರಿದಿದ್ದರು. ಇದರ ಬೆನ್ನಲ್ಲೇ ಮತ್ತೆ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರು ಸಿಎಂ ಕುರ್ಚಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಕೈಗೊಂಡಿದ್ದು, ಕೈ ನಾಯಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ತಮಗೆ ಎದುರಾದ ಡಿಕೆ ಶಿವಕುಮಾರ್ ಬಳಿ ಮಾಧ್ಯಮದವರು ಸಿಎಂ ಸಿದ್ದರಾಮಯ್ಯನವರು ಎರಡುವರೆ ವರ್ಷಗಳನ್ನು ಪೂರೈಸಿದ ಬಳಿಕ ನೀವು ಮುಖ್ಯಮಂತ್ರಿಯಾಗುತ್ತಿರೇ ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್ ʼಅದು ನಿಮ್ಮ ಕಡೆಯ ಊಹಾಪೋಹ. ನನ್ನ ಕಡೆ ಅಂತಹ ಯಾವುದೇ ರೀತಿಯ ಊಹಾಪೋಹವಿಲ್ಲ, ಅದು ನನ್ನ ಕಣ್ಣಿಗೂ ಬಿದ್ದಿಲ್ಲ ಹಾಗೂ ಕಿವಿಗೂ ಸಹ ಬಿದ್ದಿಲ್ಲʼ ಎಂದು ಹೇಳಿಕೆ ನೀಡಿದರು. ಈ ಮೂಲಕ ಎರಡೂವರೆ ವರ್ಷ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದರು.
Comments are closed.