Dharmasthala: ಧರ್ಮಸ್ಥಳ: ಮೂರು ಹೊಸ ರೂಟ್ ಬಸ್ ಗಳಿಗೆ ಚಾಲನೆ ನೀಡಿದ ಶಾಸಕ ಹರೀಶ್ ಪೂಂಜ!

Share the Article

Dharmasthala: ಶಾಸಕ ಹರೀಶ್ ಪೂಂಜ ಅವರು ಧರ್ಮಸ್ಥಳದಿಂದ -ಉಜಿರೆ-ಬೆಳಾಲು -ಬಂದಾರು-ಉಪ್ಪಿನಂಗಡಿ, ಸೌತಡ್ಕ ಹಾಗೂ ನೆಲ್ಯಾಡಿ, ಮಾರ್ಗವಾಗಿ ಮೂರು ಹೊಸ ರೂಟ್ ಬಸ್ ಗಳಿಗೆ ಜುಲೈ 08 ರಂದು ಧರ್ಮಸ್ಥಳ (Dharmasthala) ದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ,ಧರ್ಮಸ್ಥಳ ಸಿ.ಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್,ಪ್ರಮುಖರಾದ ರತ್ನವರ್ಮ ಜೈನ್, ಮಾಜಿ ತಾಲೂಕು ಪಂಚಾಯತ್‌ ಸದಸ್ಯರಾದ ಕೃಷ್ಣಯ್ಯ ಆಚಾರ್ಯ,ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಹ ಸಂಚಾಲಕ ಸಂದೀಪ್‌ ರೈ, ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ ಬಂದಾರು, ಧರ್ಮಸ್ಥಳ ಶಕ್ತಿ ಕೇಂದ್ರ ಪ್ರಮುಖರಾದ ಹರ್ಷಿತ್ ಜೈನ್, ವಿಕ್ರಮ್ ಗೌಡ, ಧರ್ಮಸ್ಥಳ ಪಂಚಾಯತ್ ಸದಸ್ಯರಾದ ದಿನೇಶ್ ರಾವ್, ರವಿ ಕುಮಾ‌ರ್, ಬಂದಾರು ಗ್ರಾಮಸ್ಥರಾದ ಶ್ರೀಧರ ಗೌಡ, ಡೊಂಬಯ್ಯ ಗೌಡ, ಪ್ರಶಾಂತ್ ಗೌಡ,ಮೋಹನ್ ಬಂಗೇರ, ಮುಂತಾದವರು ಜೊತೆಗಿದ್ದರು.

ಇದನ್ನೂ ಓದಿ: Protest: ದೇಶಾದ್ಯಂತ ನಾಳೆ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ – ಪ್ರತಿಭಟಿಸಲಿದ್ದಾರೆ ಬರೋಬ್ಬರಿ 25ಕೋಟಿಗೂ ಹೆಚ್ಚು ಕಾರ್ಮಿಕರು

Comments are closed.