Rashmika Mandanna: ʼಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇʼ- ಮತ್ತೆ ಟ್ರೋಲ್‌ಗೊಳಗಾದ ರಶ್ಮಿಕಾ ಮಂದಣ್ಣ

Rashmika Mandanna: ಸದಾ ವಿವಾದಾತ್ಮಕ ಹೇಳಿಕೆಯನ್ನು ನೀಡುವಲ್ಲಿ ಎತ್ತಿದ ಕೈ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮತ್ತೊಂದು ಹೇಳಿಕೆ ನೀಡಿದ್ದಾರೆ. ʼ ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೆ ಅನಿಸುತ್ತದೆʼ ಎಂದು ಹೇಳಿದ್ದಾರೆ.ಈ ಪೋಸ್ಟ್‌ಗೆ ಸಾಕಷ್ಟು ಜನರು ಕಮೆಂಟ್ ಮಾಡಿದ್ದಾರೆ. ಇವರ ಈ ಹೇಳಿಕೆಗೆ ಸಾಕಷ್ಟು ಜನರು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಕೊಡವ ಸಮುದಾಯದಿಂದ ಬಂದು ಚಿತ್ರರಂಗದಲ್ಲಿ ಮಿಂಚಿದವರ ಹೆಸರನ್ನು ಕೂಡ ನೀಡಲಾಗಿದೆ. ಈ ಮೊದಲು ರಶ್ಮಿಕಾ ಸಾಕಷ್ಟು ಬಾರಿ ಈ ರೀತಿಯ ಎಡವಟ್ಟು ಮಾಡಿಕೊಂಡದ್ದು ಇದೇ ಮೊದಲಲ್ಲ. ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದು ಹೇಳಿದ್ದಾರೆ.
ರಶ್ಮಿಕಾ ಮೇಜೋ ಸ್ಟೋರಿಗೆ ಸಂದರ್ಶನದಲ್ಲಿ ಈ ಕುರಿತು ಹೇಳಿದ್ದಾಳೆ. ನಮ್ಮ ಕೊಡವ ಸಮುದಾಯದಿಂದ ಯಾರೂ ಚಿತ್ರರಂಗಕ್ಕೆ ಬರಲಿಲ್ಲ. ಬಹುಶಃ ನಮ್ಮ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೇ. ನಮ್ಮ ಸಮುದಾಯದವರು ತುಂಬಾನೇ ಜಡ್ಜ್ ಮಾಡುತ್ತಾರೆ. ನಾನು ಆಡಿಷನ್ ಮಾಡುತ್ತೇನೆ ಎಂದು ಕುಟುಂಬದವರಿಗೆ ಹೇಳಿರಲಿಲ್ಲ. ಸಿನಿಮಾ ರಂಗಕ್ಕೆ ಹೋಗುತ್ತೇನೆ ಎಂದುʼ ಎಂದು ಹೇಳಿದ್ದಾರೆ.
View this post on Instagram
ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದವರು ಹಲವು ಮಂದಿ ಇದ್ದಾರೆ. ಪ್ರೇಮಾ, ಹರ್ಷಿಕಾ ಪೂಣಚ್ಚ, ಕೃಷಿ ತಾಪಂಡ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಶ್ವೇತಾ ಚಂಗಪ್ಪ ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ರಶ್ಮಿಕಾ ಅವರು ಕರ್ನಾಟಕದವರಾಗಿ ಇವರ ಬಗ್ಗೆ ತಿಳಿಯದೇ ಇರುವುದು ವಿಪರ್ಯಾಸವೇ ಸರಿ.
ಖಾಸಗಿ ಟಿವಿಗೆ ನೀಡಿದ ಹೇಳಿಕೆಯಲ್ಲಿ ‘ಈ ಬಗ್ಗೆ ನಾವೇನು ಮಾತನಾಡೋದು, ಜನಕ್ಕೆ ಇದರ ಬಗ್ಗೆ ಗೊತ್ತಿದೆ. ಅವರ ಹೇಳಿಕೆಯ ಬಗ್ಗೆ ಜನರೇ ಕಾಮೆಂಟ್ ಮಾಡಿದ್ದಾರೆ. ಕೊಡವ ಸಮಾಜದಿಂದ ಯಾರೆಲ್ಲಾ ಹೀರೋಯಿನ್ಸ್ ಆಗಿದ್ದಾರೆ ಎಂದು ಅವರೇ ತಿಳಿಸಿದ್ದಾರೆ. ನಾನೆಂಥ ಹೇಳೋದು ಇದರಲ್ಲಿ. ಅವರ ಮಟ್ಟಿಗೆ ನಾವು ಮಾತನಾಡೋದಕ್ಕೆ ಆಗೋದಿಲ್ಲ.ನಾವು ನಾವೇ, ಅವರು ಅವರೇ. ಜನ ಹೇಗೆ ಮಾತಾಡ್ತಾರೆ ಅಂತಾ ಕೂರ್ಗ್ ಜನಕ್ಕೆ ಗೊತ್ತಿದೆ. ನಾನು ಇಂಡಸ್ಟ್ರಿಯಲ್ಲಿ ಮಾತನಾಡೋದಕ್ಕಿಂತ ಕೆಲಸ ಮಾಡಿಕೊಂಡು ಹೋಗಿದ್ದೀನಿ. ನಾನು ಒಬ್ಬಳು ಕೆಲಸಗಾರರು. ಮುಂದೆ ಏನು ಮಾಡಬೇಕು ಅದರ ಬಗ್ಗೆ ಯೋಚನೆ ಮಾಡುತ್ತೇವೆ ಅಷ್ಟೇ. ಅವರ ಮಾತಿಗೆಲ್ಲಾ ಕಾಮೆಂಟ್ ಮಾಡೋವಷ್ಟು ದೊಡ್ಡ ವ್ಯಕ್ತಿಯೇನಲ್ಲ. ಜನರೇ ನನಗೆ ಪ್ರಶಸ್ತಿ ಕೊಟ್ಟಿದ್ದಾರೆ. ಮತ್ತೇನು ಬೇಕು’ ಎಂದು ಹೇಳಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ಪ್ರಕಟ ಮಾಡಿದೆ.
Comments are closed.