Puttur: ಪುತ್ತೂರು: ರಿಕ್ಷಾ-ಬೈಕ್ ಅಪಘಾತ; ಮಗು ಸಹಿತ ಏಳು ಮಂದಿಗೆ ಗಾಯ

Share the Article

Puttur: ಬೈಪಾಸ್ ರಸ್ತೆಯ ಉರ್ಲಾಂಡಿ ಸಮೀಪ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತವಾಗಿ ಮಗು ಸಹಿತ ಏಳುಮಂದಿಗೆ ಗಾಯಗೊಂಡ ಘಟನೆ ಜೂನ್ 29 ರ ಇಂದು ಭಾನುವಾರ ನಡೆದಿದೆ.

ರಿಕ್ಷಾದಲ್ಲಿದ್ದ ಉರೂಸ್ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ಸಾಲೆತ್ತೂರು ಮೂಲದ ಮೊಮ್ಮದ್ ತಮೀಮ್ ,ಹಮೀದ್ , ಇಸ್ಮಾಯಿಲ್,ಇಬ್ರಾಹಿಂ , ಸಮೀ‌ರ್ , ಸುಲೈಮಾನ್‌ ಹಾಗೂ ಬೈಕ್ ಸವಾರ ಕೀರ್ತನ್ ಗಾಯಗೊಂದಿದ್ದಾರೆ.

ನಗರದಿಂದ ದರ್ಬೆ ಕಡೆಗೆ ಬೈಕ್ ತೆರಳುತ್ತಿದ್ದ ಸಂದರ್ಭಒಳರಸ್ತೆಯಿಂದ ಕಾರು ಏಕಾಏಕಿ ಮುಖ್ಯ ರಸ್ತೆಗೆ ಬಂದಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬಲ ಬದಿಗೆ ಬೈಕ್ ಚಲಾಯಿಸಿದ್ದಾರೆ. ಮುಂಭಾಗದಿಂದ ಬಂದ ರಿಕ್ಷಾಕ್ಕೆ ಗುದ್ದಿದ್ದು, ರಿಕ್ಷಾ ಚಾಲಕ ತಕ್ಷಣ ಬ್ರೇಕ್ ಹಾಕಿದ ಕಾರಣ ತಲೆಕೆಳಗಾಗಿ ಬಿದ್ದಿದೆ. ಗಾಯಗಳುಗಳನ್ನು ಸಮೀಪದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: KPCC: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ ಸಾಮಾಜಿಕ ಜಲಾತಾಣ ವಿಭಾಗಕ್ಕೆ ಹೊಸ ಅಧ್ಯಕ್ಷರಾಗಿ ಐಶ್ವರ್ಯ ಮಹಾದೇವ್‌ ನೇಮಕ

Comments are closed.