Shefali Jariwala: ಶೆಫಾಲಿ ಜರಿವಾಲ ಸಾವಿಗೆ ಹೃದಯಾಘಾತ, ಇಂಜೆಂಕ್ಷನ್‌ ಕಾರಣ ಅಲ್ಲ: ಸಾವಿನ ರಹಸ್ಯ ತಿಳಿಸಿದ ವೈದ್ಯರು

Share the Article

Shefali Jariwala: ಶೆಫಾಲಿ ಜರಿವಾಲ ತಮ್ಮ 42 ನೇ ವಯಸ್ಸಿನಲ್ಲಿ ಸಾವಿಗೀಡಾಗಿದ್ದು, ಸಾವಿನ ಕುರಿತು ವೈದ್ಯರು ಇದೀಗ ಮಾಹಿತಿ ನೀಡಿದ್ದಾರೆ.

ಜೂನ್‌ 27 ರಂದು ರಾತ್ರಿ ಶೆಫಾಲಿ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಕೂಡಲೇ ಅವರ ಪತಿ ಪರಾಗ್‌ ತ್ಯಾಗಿ ತನ್ನ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಆಸ್ಪತ್ರೆಗೆ ಬರುವ ಮೊದಲೇ ಆಕೆ ನಿಧನ ಹೊಂದಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ನಂತರ ಶವವನ್ನು ಕೂಪರ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಏಕಾಏಕಿ ಬಿಪಿ ಲೋ ಆಗಿದ್ದರಿಂದ ಶೆಫಾಲಿ ನಿಧನ ಹೊಂದಿದರು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಭಾನುವಾರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದ ಜರಿವಾಲಾ ಉಪವಾಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: R Ashok : ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದ ಪದಗಳೇ ಇಲ್ಲ -ಆರ್ ಅಶೋಕ್ ಹೇಳಿಕೆ

Comments are closed.