OLX app: OLX app ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ: ಆರೋಪಿಯ ಬಂಧನ

OLX app: OLX APP ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ .2,50,000/- ಹಣ ಪಡೆದು ವಂಚನೆ ಮಾಡಿದ್ದು, ಈ ಬಗ್ಗೆ ದಿನಾಂಕ: 28-06-2025 ರಂದು ಮಂಗಳೂರು ನಗರ ಸೆನ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿಚಂದ್ರ ಮಂಜುನಾಥ (29) ಎಂಬ ವ್ಯಕ್ತಿ ಬಂಧಿತ ಆರೋಪಿ. ಈ ಪ್ರಕರಣದಲ್ಲಿ ತನಿಖೆ ಕೈಗೊಂಡು OLX APP ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿತನ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿತ ರವಿಚಂದ್ರ ಮಂಜುನಾಥ ರೇವಣಕರ ನನ್ನು ವಶಕ್ಕೆ ಪಡೆದು ಸೆನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ.
ತನಿಖೆಯ ವೇಳೆ ಆರೋಪಿ ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 21 ಬ್ಯಾಂಕ್ ಖಾತೆಗಳುನ್ನು ಹೊಂದಿದ್ದು, ಹಾಗೂ 08 ಸಿಮ್ ಕಾರ್ಡ್ ಗಳು ಬಳಕೆ ಮಾಡಿದ್ದು ಕಂಡುಬಂದಿರುತ್ತದೆ.
08 ಮೊಬೈಲ್ ನಂಬ್ರ ಗಳ ಮೇಲೆ 80 ಕ್ಕೂ ಹೆಚ್ಚಿನ ಸೈಬರ್ ವಂಚನೆ ದಾಖಲಾಗಿರುವುದು ತಿಳಿದುಬಂದಿದೆ. ಆರೋಪಿ ಕಳೆದ 03 ವರ್ಷಗಳಿಂದ OLX APP ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ತಾನು ಉಪಯೋಗಿಸುತ್ತಿದ್ದ ಮೊಬೈಲ್ ನ್ನು ಕೆಲವು ದಿನಗಳ ಮಟ್ಟಿಗೆ ಇಟ್ಟುಕೊಂಡು ಅದನ್ನು ಮಾರಾಟ ಮಾಡುತ್ತಿದ್ದು ಹೊಸ ಸಿಮ್ ಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ.
Comments are closed.