Hassan : ಹಾಸನದಲ್ಲಿ ಇಂದು ಹೃದಯಘಾತಕ್ಕೆ 3 ಬಲಿ – ತಿಂಗಳಲ್ಲಿ 21 ಜನ ಸಾವು

Share the Article

Hassan: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೃದಯಘಾತ ಹೆಚ್ಚಾಗಿ ಸಂಭವಿಸುತ್ತಿದೆ. ಅದರಲ್ಲೂ ಯುವಕ ಯುವತಿಯರಲ್ಲೇ ಈ ಪ್ರಕರಣ ಬೆಳಕಿಗೆ ಬರುತ್ತಿರುವುದು ಅಘಾತವನ್ನು ಉಂಟು ಮಾಡಿದೆ. ಆಶ್ಚರ್ಯದ ವಿಚಾರವೇನೆಂದರೆ ಇಂದು ಹಾಸನದಲ್ಲಿ ಒಂದೇ ದಿನ ಮೂವರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಅಘಾತಕಾರಿ ಸಂಗತಿ ಏನೆಂದರೆ ಕಳೆದ ಒಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯಲ್ಲಿ ಬರೋಬ್ಬರಿ 18 ಮಂದಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಇದೀಗ ಇಂದಿನ ಸಂಖ್ಯೆಯನ್ನು ಸೇರಿಸಿ 21 ಜನ ಒಂದೇ ತಿಂಗಳಲ್ಲಿ ಹಾಸನದಲ್ಲಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ.

ಇಂದು ಬಲಿಯಾದವರು :

ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದ ಲೇಪಾಕ್ಷಿ (50) ಎನ್ನುವವರು ಬೆಳಿಗ್ಗೆ ಮನೆಯಲ್ಲಿದ್ದಾಗಲೇ ಸುಸ್ತು ಎಂದು ಕುಸಿದು ಬಿದಿದ್ದರು. ಲೇಪಾಕ್ಷಿ ಅವರನ್ನು ತಕ್ಷಣ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಲೇಪಾಕ್ಷಿ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಟೀ ಕುಡಿಯುತ್ತಿರುವಾಗಲೇ ಪ್ರಾಧ್ಯಾಪಕ ಒಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಳೆನರಸೀಪುರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಮುತ್ತಯ್ಯ (58) ಸಾವನಪ್ಪಿದ್ದಾರೆ.

ಹಾಸನ ಜಿಲ್ಲೆಯ ಜನರಾಯಪಟ್ಟಣದಲ್ಲಿ ಜಮೀನಿನಲ್ಲಿ ಉಳುಮೆ ಮಾಡುವಾಗಲೇ ಯೋಧ ಸಾವನ್ನಪ್ಪಿದ್ದಾನೇ. ಮೃತ ಯೋಧನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ (38) ಎಂದು ತಿಳಿದುಬಂದಿದೆ. 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಲೋಹಿತ್ ರಜೆಗೆಂದು ಊರಿಗೆ ತೆರಳಿದ್ದಾಗ ಜಮೀನು ಉಳುಮೆ ಮಾಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:Bengaluru : ನಾನು, ಶಿವಕುಮಾರ್ ಚೆನ್ನಾಗೆ ಇದ್ದೇವೆ, ನಾವಿಬ್ರು ಒಂದೇ- ಡಿಕೆಶಿಯ ಕೈ ಎತ್ತಿ ಹೇಳಿದ ಸಿಎಂ ಸಿದ್ದರಾಮಯ್ಯ

Comments are closed.