Political: ರಮೇಶ್ ಜಾರಕಿಹೊಳಿ ಸಿಡಿ ರಿಲೀಸ್ ಮಾಡಿಸಿದ್ದೆ ವಿಜಯೇಂದ್ರ, ಡಿಕೆಶಿ ಜೊತೆ ಸೇರಿ ನಡೆಯಿತೇ ಪಕ್ಕ ಪ್ಲಾನ್?

Share the Article

Political : ಒಂದು ಸಮಯದಲ್ಲಿ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್‌ ಸಿಡಿಸಿದ್ದು, ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸಲು ಬಿವೈ ವಿಜಯೇಂದ್ರ ಅವರು ಡಿಕೆಶಿ ಜೊತೆ ಕೈಜೋಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹೌದು, ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದವರು ಯಾರು? ಡಿವಿಜಯೇಂದ್ರ. ಬಿ.ವೈ.ವಿಜಯೇಂದ್ರ ಹಾಗೂ ಡಿ.ಕೆ.ಶಿವಕುಮಾರ್ ಸೇರಿ ರಮೇಶ್ ಜಾರಕಿಹೊಳಿ ಜೀವನವನ್ನೇ ಹಾಳು ಮಾಡಿದರು. ಬಿ.ವೈ ವಿಜಯೇಂದ್ರ ಇಂತಹ ಹಲ್ಕಾ ಕೆಲ್ಸ ಯಾರಾದರೂ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಯಡಿಯೂರಪ್ಪ ತಮ್ಮ ಮಗನನ್ನು ಅಧ್ಯಕ್ಷ ಮಾಡಿಸುವ ಸಲುವಾಗಿ ನನ್ನನ್ನು ಉಚ್ಚಾಟನೆ ಮಾಡಿಸಿದರು. ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ಹಲವು ಕೇಸ್ ಇದೆ. ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ;Mangaluru : ತಮ್ಮನ ಅಂತ್ಯಕ್ರಿಯೆಗೆ ಬಂದಿದ್ದ ಅಕ್ಕ ಅಪಘಾತದಲ್ಲಿ ಸಾವು !!

Comments are closed.