Bengaluru : ಜಾಸ್ತಿ ಹಣ ಪೀಕೋ ಆಟೋ ಚಾಲಕರೇ ಎಚ್ಚರ!! ನಿಮ್ಮ ನಟ್ಟು- ಬೋಲ್ಟು ಸರಿ ಮಾಡಲು ಸಾರಿಗೆ ಸಚಿವರು ಸಾರಿದ್ದಾರೆ ಸಮರ

Share the Article

Bengaluru : ರಾಜ್ಯದಲ್ಲಿ ರಾಪಿಡೋ ಬೈಕ್, ಟ್ಯಾಕ್ಸಿಗಳು ನಿಷೇಧಗೊಂಡ ಬಳಿಕ ಆಟೋ ಚಾಲಕ ಹಾವಳಿ ಮಿತಿ ಮೀರಿದೆ. ಕೆಲವು ಆಟೋ ಚಾಲಕರಿಂದ ನಿತ್ಯವು ಸಾರ್ವಜನಿಕರು ತೊಂದರೆ ಆಗುತ್ತಿದೆ. ನಿರ್ದಿಷ್ಠ ಪ್ರಯಾಣ ದರಕ್ಕಿಂತಲೂ ಹೆಚ್ಚು ಹಣ ಕೀಳಲು ಮುಂದಾಗಿದ್ದಾರೆ. ಇದೀಗ ಇಂಥವರ ನಟ್ಟು ಬೋಟು ಸರಿ ಮಾಡಲು ಸ್ವತಹ ಸಾರಿಗೆ ಸಚಿವ ರಮಾಲಿಂಗ ರೆಡ್ಡಿ ಅವರ ಸಮರ ಸಾರಿದ್ದಾರೆ.

ಹೌದು, ನಗರದಲ್ಲಿ ಆಪ್ ಆಧಾರಿತ ಆಟೋಗಳು ಸಂಚರಿಸುತ್ತಿವೆ. ಈ ಆಪ್ ಆಧಾರಿತ ಆಟೋ ಚಾಲಕರಿಂದ ಪ್ರಯಾಣಿಕರಿಂದ ದುಬಾರಿ ದರವನ್ನು ವಸೂಲಿ ಮಾಡುತ್ತಿರುವುದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಆಪ್ ಆಧಾರಿತ ಆಟೋಗಳಾಗಲಿ, ಇನ್ನಾವುದೇ ಮಾದರಿಯ ಆಟೋಗಳಾಗಲಿ ದರಕ್ಕಿಂತ ಹೆಚ್ಚು ವಸೂಲಿ ಮಾಡಿದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಖಡಕ್ ಆದೇಶ ಮಾಡಿದ್ದಾರೆ.

ಸಾರ್ವಜನಿಕರಿಂದ ದೂರುಗಳು ಬಂದ ಬೆನ್ನಲ್ಲೇ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಆಯಪ್ ಆಧಾರಿತ ಆಟೋಗಳು ಮತ್ತು ಇನ್ನಿತರ ಆಟೋಗಳು ಕಾನೂನು ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರಯಾಣಿಕರಿಂದ ಹಗಲು ದರೋಡೆ ಮಾಡಿದ್ರೆ ಅಂತಹವರ ಪರ್ಮೀಟ್ ರದ್ದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ.

ಅಲ್ಲದೆ ಒಂದುವೇಳೆ ನಿಗದಿಕ್ಕಿಂತ ಹೆಚ್ಚಿನ ದರ ಕೇಳುವುದು,ಒಪ್ಪದಿದ್ದಲ್ಲಿ ಪಯಾಣವನ್ನು ರದ್ದುಗೊಳಿಸುವುದು,ಈ ರೀತಿಯ ಪ್ರಕರಣಗಳ ಬಗ್ಗೆ ದೂರು ಬಂದಲ್ಲಿ ಕೂಡಲೇ ಕ್ರಮಕೈಗೊಳ್ಳುವಂತೆ, ಆಟೋಗಳ ಪರ್ಮಿಟ್ ರದ್ದು ಮಾಡುವುದರ ಜೊತೆಗೆ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ:Viral Video : ಲಕ್ಷಾಂತರ ಮಂದಿ ನಡುವೆ ಸಿಕ್ಕಿಹಾಕಿಕೊಂಡ ಆಂಬುಲೆನ್ಸ್ – ಮಾನವ ಸರಪಳಿ ಮಾಡಿ ದಾರಿ ಮಾಡಿಕೊಟ್ಟ ಜನ, ರೋಮಾಂಚನಕಾರಿ ವಿಡಿಯೋ ವೈರಲ್

Comments are closed.