Oldest Rock: ಭೂಮಿಯ ಮೇಲಿನ ಅತ್ಯಂತ ಹಳೆಯ ಶಿಲೆಗಳು ಪತ್ತೆ – ಈ ಬಂಡೆ ಎಷ್ಟು ವರ್ಷ ಹಳೆಯದು ಗೊತ್ತಾ?

Oldest Rock: ಕೆನಡಾದ ಈಶಾನ್ಯ ಪ್ರಾಂತ್ಯದ ಕ್ವಿಬೆಕ್‌ನಲ್ಲಿರುವ ಹಡ್ಸನ್ ಕೊಲ್ಲಿಯ ಪೂರ್ವ ತೀರದಲ್ಲಿ, ಇನುಕ್ಜುವಾಕ್‌ನ ಇನ್ಯೂಟ್ ಪುರಸಭೆಯ ಬಳಿ, ಜ್ವಾಲಾಮುಖಿ ಶಿಲೆಯ ಪಟ್ಟಿಯಿದೆ, ಇದು ಗಾಢ ಮತ್ತು ತಿಳಿ ಹಸಿರು ಬಣ್ಣಗಳ ಮಿಶ್ರಣದಿಂದ ಕಾಣುತ್ತಿದೆ. ಗುಲಾಬಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳನ್ನು ಹೊಂದಿದೆ. ಹೊಸ ಪರೀಕ್ಷೆಯು ಇವು ಭೂಮಿಯ ಅತ್ಯಂತ ಹಳೆಯ ಬಂಡೆಗಳು ಎಂದು ಅಂದಾಜಿಸಲಾಗುತ್ತಿದೆ.

ಈ ಗ್ರೀನ್‌ಸ್ಟೋನ್ ಬೆಲ್ಟ್ನ ಬಂಡೆಗಳು 4.16 ಶತಕೋಟಿ ವರ್ಷಗಳಷ್ಟು ಹಳೆಯವು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಎರಡು ಪ್ರತ್ಯೇಕ ಪರೀಕ್ಷಾ ವಿಧಾನಗಳು ವಯಸ್ಸನ್ನು ದೃಢಪಡಿಸಿದವು. ಈ ಹಿಂದೆ, ಅತ್ಯಂತ ಹಳೆಯ ಬಂಡೆಗಳು ಸುಮಾರು 4.03 ಶತಕೋಟಿ ವರ್ಷಗಳಷ್ಟು ಹಳೆಯ ಬಂಡೆ ಕೆನಡಾದ ವಾಯುವ್ಯ ಪ್ರಾಂತ್ಯಗಳಲ್ಲಿ ಕಂಡುಬಂದಿತ್ತು.
Puttur: ಪುತ್ತೂರ : ದೈಹಿಕ ಸಂಪರ್ಕ ನಡೆಸಿ ವಂಚಿಸಿದ ಪ್ರಕರಣ: ಗಂಡು ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ!
Comments are closed.