Shefali Jariwala Passed Away: ‘ಕಾಟಾ ಲಗಾ’ ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯ ಸ್ತಂಭನದಿಂದ ನಿಧನ

Shefali Jariwala Passed Away: ‘ಕಾಟಾ ಲಗಾ’ ಖ್ಯಾತಿಯ ಮತ್ತು ‘ಬಿಗ್ ಬಾಸ್ 13’ ಸ್ಪರ್ಧಿ ಶೆಫಾಲಿ ಜರಿವಾಲಾ ಅವರು 42 ನೇ ವಯಸ್ಸಿನಲ್ಲಿ ನಿಧನರಾದರು. ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದೆ.

27ನೇ ತಾರೀಖಿನ ರಾತ್ರಿ ನಟಿಗೆ ಹೃದಯಾಘಾತವಾಗಿದ್ದು, ಅವರು ಇನ್ನಿಲ್ಲ ಎಂದು ಆಸ್ಪತ್ರೆಯವರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪುನೀತ್ ರಾಜ್‌ಕುಮಾರ್ ಜೊತೆ ಹುಡುಗರು ಚಿತ್ರದಲ್ಲಿ ಈ ನಟಿ ‘ನಾ ಬೋರ್ಡು ಇರದ ಬಸ್ಸನು ಹತ್ತಿ ಕೊಂಡ ಚೋಕರಿ’ ಹಾಡಿಗೆ ಶೆಫಾಲಿ ಮಸ್ತ್ ಆಗಿ ಕುಣಿದಿದ್ದರು. ಸದ್ಯ ಶೆಫಾಲಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
2002 ರಲ್ಲಿ ಬಂದ ‘ಕಾಟಾ ಲಗಾ’ ಹಾಡಿನ ಮೂಲಕ ಶೆಫಾಲಿ ಜರಿವಾಲಾ ಪ್ರಸಿದ್ಧರಾದರು. ಶೆಫಾಲಿ 2004 ರಲ್ಲಿ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ‘ಮುಜ್ಸೆ ಶಾದಿ ಕರೋಗಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ ನ 11 ನೇ ಸೀಸನ್ ನಲ್ಲಿ ನಟಿ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಕೂಡ ಈ ಸೀಸನ್ ನಲ್ಲಿದ್ದರು ಮತ್ತು ಅವರಿಗೆ ಕೂಡಾ ಹೃದಯಾಘಾತದಿಂದ ಮೃತಪಟ್ಟಿದ್ದರು.
ಇದನ್ನೂ ಓದಿ: Puttur: ಪುತ್ತೂರು: ಸಾಮಾಜಿಕ ಕಾರ್ಯಕರ್ತ ಸುದರ್ಶನ ಪುತ್ತೂರು ಮೇಲೆ ಹಲ್ಲೆಗೆ ಯತ್ನ
Comments are closed.