Viral Video : ಲಕ್ಷಾಂತರ ಮಂದಿ ನಡುವೆ ಸಿಕ್ಕಿಹಾಕಿಕೊಂಡ ಆಂಬುಲೆನ್ಸ್ – ಮಾನವ ಸರಪಳಿ ಮಾಡಿ ದಾರಿ ಮಾಡಿಕೊಟ್ಟ ಜನ, ರೋಮಾಂಚನಕಾರಿ ವಿಡಿಯೋ ವೈರಲ್

Viral Video : ಪುರಿ ಜಗನ್ನಾಥ ರಥಯಾತ್ರೆ ವೇಳೆ ಲಕ್ಷಾಂತರ ಭಕ್ತರು ರಥಭೇದಿಯಲ್ಲಿ ಜಮಾಹಿಸಿದ್ದರು. ಈ ಸಂದರ್ಭದಲ್ಲಿ ಭಕ್ತರ ಸಮೂಹದ ನಡುವೆ ಆಂಬ್ಯುಲೆನ್ಸ್ ಒಂದು ಸಿಲುಕಿದ್ದು,ಜನರ ನಡುವೆ ದಾರಿ ಮಾಡಿಕೊಂಡು ಹೋಗಲು ಚಾಲಕ ತಡಕಾಡಿದ್ದಾನೆ. ಈ ವೇಳೆ ಮಾನವೀಯತೆ ಮೆರೆದ ಭಕ್ತಾದಿಗಳು ಮಾನವ ಸರಪಳಿ ಮಾಡಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದಾರೆ.

#WATCH | Odisha: Around 1500 BJP Yuva Morcha volunteers formed a human chain amidst the massive gathering during the Lord Jagannath #RathYatra in Puri to ensure a clear path for ambulances, showcasing their dedication to public service.
Source: BJP Yuwa Morcha pic.twitter.com/mCJyUsyfW9
— ANI (@ANI) June 27, 2025
ಹೌದು, ಆಂಬುಲೆನ್ಸ್ ತಮ್ಮ ನಡುವೆ ಸಿಕ್ಕಿಹಾಕಿಕೊಂಡಿರುವುದನ್ನು ಗಮನಿಸಿದ ಸಾವಿರಾರು ಮಂದಿ ಭಕ್ತರು ಕೂಡಲೇ ಆಂಬಲೆನ್ಸ್ ಗೆ ದಾರಿ ಮಾಡಿಕೊಡಲು ಮುಂದಾಗಿದ್ದು, ರಥ್ತಯಾತ್ರೆಯಲ್ಲಿ ಭಾಗಿಯಾಗಿದ್ದ ಸ್ವಯಂಸೇವಕರು ತಾವಾಗಿಯೇ ಮಾನವ ಸರಪಳಿಯನ್ನು ರಚಿಸಿದ್ದಾರೆ.ಆ ಮೂಲಕ ಆಂಬ್ಯುಲೆನ್ಸ್ ಬರುತಿದ್ದಂತೆ ಮರುಕ್ಷಣವೇ ದಾರಿ ತಾನಾಗಿಯೇ ತೆರೆದುಕೊಂಡಿದೆ.
ಕೂಡಲೇ ಅಲರ್ಟ್ ಆದ ಸ್ವಯಂ ಸೇವಕರು ಮತ್ತು ಭಕ್ತರು ಒಬ್ಬರಿಗೆ ಒಬ್ಬರು ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿ ಕೆಲವೇ ಕ್ಷಣದಲ್ಲಿ ಆಂಬ್ಯುಲೆನ್ಸ್ ತೆರಳಲು ಬೇಕಾದ ದಾರಿ ಮಾಡಿಕೊಟ್ಟಿದ್ದಾರೆ. ಈ ದೃಶ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರೋಮಾಂಚನಕಾರಿಯಾಗಿದೆ.
Comments are closed.