Shefali Jariwala: ನಟಿ ಶೆಫಾಲಿ ಜರಿವಾಲ ಸಾವು ಹೃದಯಾಘಾತದಿಂದ ಅಲ್ಲ: ಪೊಲೀಸರು ಹೇಳಿದ್ದೇನು?

Shefali Jariwala: ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿತ್ತು. ಈಗ ಪೊಲೀಸರು ನಟಿಯ ನಿಧನದ ಕುರಿತು ಅನುಮಾನ ಹೊರ ಹಾಕಿದ್ದಾರೆ. ಹೃದಯಾಘಾತ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

42 ರ ಹರೆಯದ ಶೆಫಾಲಿ ಮಧ್ಯರಾತ್ರಿ ಅಸ್ವಸ್ಥಗೊಂಡ ಕಾರಣ ಮುಂಬೈನ ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಗೆ ಕರೆ ತರುವ ಮುನ್ನವೇ ನಟಿ ನಿಧನ ಹೊಂದಿದ್ದರು ಎನ್ನಲಾಗಿದೆ. ಮೊದಲಿಗೆ ಇದು ಹೃದಯಾಘಾತ ಎಂದು ಹೇಳಲಾಗಿತ್ತು. ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ.
Comments are closed.