KEB: ವಿದ್ಯುತ್ ಅವಘಡಗಳನ್ನು ತಪ್ಪಿಸಲು ವಿಶೇಷ ಮಾರ್ಗಸೂಚಿ

Share the Article

KEB: ರಾಜ್ಯದಲ್ಲಿ ವಿದ್ಯುತ್ ಅವಘಡಗಳು ಹೆಚ್ಚಾಗುತ್ತಿದ್ದು ಮಳೆಗಾಲದಲ್ಲಿ ಅತಿಯಾಗಿ ಕಾಡುತ್ತವೆ. ಹಾಗೂ ಈ ಕುರಿತಾಗಿ ಮಾತನಾಡಿದ ಕರ್ನಾಟಕದ ಮುಖ್ಯ ವಿದ್ಯುತ್ ನಿರೀಕ್ಷಕ ಟಿ ಎನ್ ಅಪ್ಪಚ್ಚು, ಕಡಿಮೆ ವೋಲ್ಟೇಜ್ ಅಳವಡಿಕೆ, ಬಹು ಮಹಡಿ ಸರ್ಕಾರಿ ಕಟ್ಟಡಗಳಲ್ಲಿ ಕಳಪೆ ಮಟ್ಟದ ವಿದ್ಯುತ್ ವ್ಯವಸ್ಥೆ ಹಾಗೂ ಅಕ್ರಮವಾಗಿ ವಿದ್ಯುತ್ ಪಡೆಯುವುದು ಇದಕ್ಕೆಲ್ಲಾ ಮುಖ್ಯ ಕಾರಣವಾಗಿದೆ ಎಂದಿದ್ದಾರೆ.

ರಾಜ್ಯ ಇಂಧನ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಅಪ್ಪಚ್ಚುು, ವಿದ್ಯುತ್ ನ ಅಸಮರ್ಪಕ ಬಳಕೆಯಿಂದ ಹೆಚ್ಚುತ್ತಿರುವ ಅಪಘಾತಗಳ ಕುರಿತು ಜಾಗೃತಿ ಮೂಡಿಸಲು ಜೂನ್ ಕೊನೆಯ ವಾರದಿಂದ ಜುಲೈ ಮೊದಲ ವಾರದವರೆಗೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ಈ ವರ್ಷದ ಧ್ಯೇಯವಾಕ್ಯ ‘ಸ್ಮಾರ್ಟ್ ಎನರ್ಜಿ, ಸೇಫ್ ನೇಶನ್’. ಹೊಸ ಯುಗದ ವಿದ್ಯುತ್ ಉತ್ಪಾದನಾ ಪರಿಕಲ್ಪನೆಗಳನ್ನು ಉಲ್ಲೇಖಿಸಿ, ಕೇಂದ್ರವು ಸುರಕ್ಷತಾ ಕ್ರಮಗಳ ಬಗ್ಗೆಯೂ ಕಾರ್ಯನಿರ್ವಹಿಸುತ್ತಿದೆ, ವಿಶೇಷ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ;Bengaluru: ಸರ್ಕಾರಿ ಶಾಲಾ ಕಾಲೇಜು ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ಹೊಸ ಕಾರ್ಯಕ್ರಮ: ಖಾನ್ ಅಕಾಡೆಮಿ ಸಹಯೋಗದಲ್ಲಿ ಜ್ಞಾನ ಸೇತು

Comments are closed.