Puttur: ಸಹಪಾಠಿಯಿಂದ ದೈಹಿಕ ಸಂಪರ್ಕ: ವಿದ್ಯಾರ್ಥಿನಿ ಗರ್ಭಿಣಿ, ಕೇಸು ದಾಖಲು

Puttur: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ, ಗರ್ಭಿಣಿಯಾದಾಗ ನಂತರ ವಿವಾಹವಾಗಲು ನಿರಾಕರಣೆ ಮಾಡಿದ ಆರೋಪದ ಮೇರೆಗೆ ಸಹಪಾಠಿಯ ವಿರುದ್ಧ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ.

ಕೃಷ್ಣ ರಾವ್ (21) ಆರೋಪಿ. ಈತ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಯುವತಿ (21) ಕೂಡಾ ಪುತ್ತೂರು ನಿವಾಸಿಯಾಗಿದ್ದಾರೆ.
ದೂರಿನಲ್ಲೇನಿದೆ?
2024 ಅ.11 ರಂದು ಆರೋಪಿ ಬಪ್ಪಲಿಗೆ ನಿವಾಸಿ ಕೃಷ್ಣ ರಾವ್ ಸಂತ್ರಸ್ತ ಯವತಿಯನ್ನು ತನ್ನ ಮನೆಗೆ ಕರೆಸಿ ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದಾನೆ. ಅನಂತರ ಕೆಲವು ತಿಂಗಳ ಬಳಿಕ ಸಂತ್ರಸ್ತೆ ಗರ್ಭಿಣಿಯಾದಾಗ ಈ ವಿಚಾರವನ್ನು ಸಂತ್ರಸ್ತೆ ಆರೋಪಿಗೆ ತಿಳಿಸಿದ್ದಾಳೆ. ಮನೆ ಮಂದಿಯಲ್ಲಿ ಈ ವಿಚಾರ ಹೇಳಬೇಡಿ, ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಆರೋಪಿ ಒಪ್ಪಿಸಿದ್ದ. ಅನಂತರ ಯುವತಿ 9 ತಿಂಗಳ ಗರ್ಭಿಣಿಯಾಗಿದ್ದು, ಆರೋಪಿ ಮದುವೆಯಾಗಲು ನಿರಾಕರಣೆ ಮಾಡಿದ್ದಾನೆ.
ಆರೋಪಿಯ ವಿರುದ್ಧ ಸಂತ್ರಸ್ತ ಯುವತಿ ದೂರನ್ನು ದಾಖಲು ಮಾಡಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಕೋರಿದ್ದಾಳೆ.
Comments are closed.