Udupi: ಆನ್ಲೈನ್ ನಲ್ಲಿ ಅಡುಗೆ ಪದಾರ್ಥ ಕೊಳ್ಳಲು ಹೋಗಿ ಮೋಸ ಹೋದ ವ್ಯಕ್ತಿ

Udupi: ಇಂಡಿಯಾ ಮಾರ್ಟ್ ಎಂಬ ಆಪ್ ಮೂಲಕ ಅಡುಗೆ ಪದಾರ್ಥಗಳನ್ನು ಕೊಳ್ಳಲು ಹೋಗಿ ಸಾವಿರಾರು ರೂಪಾಯಿ ಕಳೆದುಕೊಂಡ ಘಟನೆ ಎಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ನಡೆದಿದೆ.

ನಾರಾಯಣ್ ಅವರು ತಾವು ಹಾಕಿಕೊಂಡಿದ್ದ ಯೋಜನೆಗೆ ಪೂರಕವಾಗಿ ಆಹಾರ ಪದಾರ್ಥಗಳನ್ನು ಖರೀದಿಸಬೇಕಿತ್ತು. ಹೀಗಿರುವಾಗ ಇವರ ಮಗ ಶಿವದಾಸ್ ರಾವ್ ಗೂಗಲ್ ನಲ್ಲಿ ಹುಡುಕಿದಾಗ ಇಂಡಿಯಾಮಾರ್ಟ್ ಅಪ್ಲಿಕೇಶನ್ ನಲ್ಲಿ ಸೋಜಿತ್ರಾ ಎಂಟರ್ಪ್ರೈಸ್ ಎಂಬ ಸಂಸ್ಥೆಯ ನಂಬರ್ ಸಿಕ್ಕಿದೆ.
ಕಾಲ್ ಮಾಡಿದಾಗ ಶಿವಸೆಂಗಾರ್ ಎಂಬ ವ್ಯಕ್ತಿ ಮಾತನಾಡಿ ವ್ಯವಹಾರ ರೂಪುರೇಷೆಗಳ ಬಗ್ಗೆ ಚರ್ಚಿಸಿ ವ್ಯವಹಾರ ಕಾನೂನುಬದ್ಧವಾಗಿರುತ್ತದೆ ಎಂದು ಹೇಳಿದ ಮೇಲೆ 120ಕೆಜಿ ಜೀರಿಗೆ, 30 ಕೆಜಿ ಕಡಲೆ ಮತ್ತು 30 ಕೆಜಿ ಉದ್ದಿನ ಬೇಳೆ ಆರ್ಡರ್ ನೀಡಿದ್ದಾರೆ.
ಇದಕ್ಕೆ ಇಪ್ಪತ್ನಾಲ್ಕು ಸಾವಿರ ರೂ ಆಗಿದ್ದು ಆತ ಒತ್ತಾಯಿಸಿದಕ್ಕೆ ಮುಂಗಡವಾಗಿ ಆನ್ಲೈನ್ ನಲ್ಲೇ ಪಾವತಿಸಿದ್ದಾರೆ. ಆದರೆ ಪಾವತಿಸಿದ ಬಳಿಕ ಸಾಮಾಗ್ರಿ ಕಳುಹಿಸದೆ ಆರೋಪಿ ಮುಬೈಲ್ ಸ್ವಿಚ್ ಆಫ್ ಮಾಡಿಟ್ಟಿದ್ದಾನೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Belagavi: ಬೆಳಗಾವಿಯಲ್ಲಿ ವೃದ್ಧರೊಬ್ಬರ ಮೇಲೆ ಕರಡಿ ದಾಳಿ: ಸಂಪೂರ್ಣ ಹರಿದು ಹೋದಂತಾದ ಮುಖ
Comments are closed.