Electric flight: ವಿಶ್ವದ ಮೊದಲ ಎಲೆಕ್ಟ್ರಿಕ್ ವಿಮಾನ ಹಾರಾಟ ಯಶಸ್ವಿ!

Electric flight: ವಿಶ್ವದ ಮೊದಲ ಎಲೆಕ್ಟ್ರಿಕ್ ವಿಮಾನ ಹಾರಾಟ ಭಾನುವಾರ ನಡೆದಿದ್ದು, ಅಮೆರಿಕದ ಬೇಟಾ ಟೆಕ್ನಾಲಜೀಸ್ ಕಂಪನಿಯ ಅಲಿಯಾ ಸಿಎಕ್ಸ್-300 ವಿದ್ಯುತ್ ಚಾಲಿತ ಪ್ರಯಾಣಿಕರ ವಿಮಾನವು ತನ್ನ ಮೊದಲ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದೆ. ಎಲೆಕ್ಟ್ರಿಕ್ ವಿಮಾನ (Electric flight) ಹಾರಾಟಕ್ಕೆ ಅನುಮತಿ ಸಿಕ್ಕಿದ್ದೇ ಆದರೆ ಅಗ್ಗದ ವಿಮಾನಯಾನ ಸೇವೆಯ ಕನಸು ನನಸಾಗಲಿದೆ.

ಸಂಸ್ಥೆಯು ಈ ವರ್ಷಾಂತ್ಯದಲ್ಲಿ ನಾಗರಿಕ ವಿಮಾನಯಾನ ಇಲಾಖೆಯಿಂದ ಈ ವಿಮಾನ ಹಾರಾಟಕ್ಕೆ ಅನುಮತಿ ಪಡೆಯುವ ನಿರೀಕ್ಷೆಯಲ್ಲಿ ಇದೆ.
ನಾಲ್ಕು ಪ್ರಯಾಣಿಕರ ಹೊತ್ತಿದ್ದ ಈ ಪರಿಸರ ಸ್ನೇಹಿ ಕಿರು ವಿಮಾನವು ಅಮೆರಿಕದ ಈಸ್ಟ್ ಹ್ಯಾಂಪ್ಟನ್‌ನಿಂದ ಜಾನ್ ಎಫ್.ಕೆನಡಿ ಏರ್ಪೋರ್ಟ್ ನಡುವಿನ 130 ಕಿ.ಮೀ.ಗಳ ಪ್ರಯಾಣವನ್ನು 35 ನಿಮಿಷಗಳಲ್ಲಿ ಕ್ರಮಿಸಿದೆ. ಸಾಮಾನ್ಯವಾಗಿ ನಾಲ್ವರನ್ನು ಹೊತ್ತೊಯ್ಯಬಲ್ಲ ಸಾಮಾನ್ಯ ವಿಮಾನಕ್ಕೆ ಇಷ್ಟು ದೂರ ಕ್ರಮಿಸಲು 13,885 ರೂ. ಇಂಧನ ವೆಚ್ಚ ತಗಲುತ್ತದೆ. ಆದರೆ ಈ ವಿದ್ಯುತ್ ಚಾಲಿತ ವಿಮಾನಕ್ಕೆ ತಗುಲಿದ ವೆಚ್ಚ ಕೇವಲ 700 ರೂ. ಎನ್ನಲಾಗಿದೆ.
Comments are closed.