Bengaluru stampede: ಬೆಂಗಳೂರು ಕಾಲ್ತುಳಿತ ಘಟನೆ: ಐಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯಕಾರಣ – ಕೇಂದ್ರಕ್ಕೆ ರಾಜ್ಯ ಸರ್ಕಾರದ ವರದಿ

Share the Article

Bengaluru stampede: RCB ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಮೂವರು ಐಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.

ವಿಜಯೋತ್ಸವದ ಮಾಹಿತಿ ಇದ್ದರೂ ಭದ್ರತೆ ನೀಡಿಲ್ಲ, ಗುಪ್ತಚರ ವಿಭಾಗದ ನಿರ್ಲಕ್ಷ್ಯವೂ ಇದೆ, ಭದ್ರತೆಗೆ ಬೇಕಾದಷ್ಟು ಸಿಬ್ಬಂದಿ ನಿಯೋಜಿಸಿಲ್ಲ, ಸಿಎಂಗೆ ಘಟನೆ ಬಗ್ಗೆ ತಡವಾಗಿ ಮಾಹಿತಿ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

11 ಮಂದಿಯ ಸಾವಿಗೆ ಇವರೇ ಹೊಣೆ

ಕೇಂದ್ರ ಸರ್ಕಾರಕ್ಕೆ ಆಡಳಿತ ಸುಧಾರಣ ಇಲಾಖೆ ಮೂಲಕ ವರದಿ ಸಲ್ಲಿಸಲಾಗಿದೆ. ವರದಿಯಲ್ಲಿ ಕಾಲ್ತುಳಿತದಿಂದ 11 ಮಂದಿಯ ಸಾವಿಗೆ ಪೊಲೀಸ್ ಭದ್ರತಾ ವೈಪಲ್ಯ ಕಾರಣವಾಗಿದೆ ಎಂದು ಬರೆಯಲಾಗಿದೆ. ಭದ್ರತೆಯ ಜೊತೆ ಅಧಿಕಾರಿಗಳ ನಡುವೆ ಸಂವಹನದ ಕೊರತೆ ಕೂಡ ಎದ್ದು ಕಾಣುತ್ತಿದೆ ಎಂದು ವರದಿಯಲ್ಲಿ ಉಲ್ಲೇಶಿಸಿದ್ದಾರೆ ಎಂಬ ಮಾಹಿತಿ ಬಂದಿದೆ.

ಇದನ್ನೂ ಓದಿ: Accident: ಮರವೂರು: ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ!

Comments are closed.