Home News Sameer: ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ, ಕೊಲೆಯಾದ ಹೆಣಗಳನ್ನು ತೋರಿಸುತ್ತೇನೆಂದ ವ್ಯಕ್ತಿ – ಪತ್ರ ವೈರಲಾಗುತ್ತಿದ್ದಂತೆ ಯುಟ್ಯೂಬರ್‌...

Sameer: ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ, ಕೊಲೆಯಾದ ಹೆಣಗಳನ್ನು ತೋರಿಸುತ್ತೇನೆಂದ ವ್ಯಕ್ತಿ – ಪತ್ರ ವೈರಲಾಗುತ್ತಿದ್ದಂತೆ ಯುಟ್ಯೂಬರ್‌ ಸಮೀರ್‌ ಮಾಡಿದ್ದೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Sameer: ನಿನ್ನೆಯಿಂದ ಧರ್ಮಸ್ಥಳ (Dharmasthala)ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ, ವ್ಯಕ್ತಿಯೊಬ್ಬ ಧರ್ಮಸ್ಥಳ ಠಾಣೆಗೆ ಬಂದು ಮಾಹಿತಿ ನೀಡುವುದಾಗಿ ಬರವಣಿಗೆ ಇರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದು ಪೊಲೀಸರು ಇದರ ಸತ್ಯ ಸತ್ಯತೆಯನ್ನು ಕಂಡುಹಿಡಿಯಲು ಬೆನ್ನುಬಿದ್ದಿದ್ದಾರೆ. ಈ ನಡುವೆ ಯೂಟ್ಯೂಬರ್ ಸಮೀರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಯಸ್, ವಕೀಲರ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಪತ್ರದಲ್ಲಿ ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಹೂತಿಟ್ಟ ಮೃತದೇಹಗಳನ್ನು ತೆಗೆದು ಪೊಲೀಸರಿಗೆ ಶರಣಾಗುತ್ತೇನೆ ಎಂದು ಪಾಪ ಪ್ರಜ್ಞೆ ಕಾಡಿದ ಕಾರಣಕ್ಕೆ ಒಪ್ಪಿಕೊಂಡಿದ್ದಾನೆ ಎಂದು ಬರೆಯಲಾಗಿದೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಇದೀಗ ಧರ್ಮಸ್ಥಳ ಕೊಲೆಗಳ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಕುರಿತು ವಿಡಿಯೊಗಳನ್ನು ಮಾಡಿದ್ದ ಸಮೀರ್‌ ಸಹ ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸೌಜನ್ಯ ಪ್ರಕರಣದ ಈಗಿನ ಅಪ್‌ಡೇಟ್‌ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ಫೋಟೊ ಜೊತೆ ʼಕಾಂತಾರʼ ಚಿತ್ರದ ಬೆಳಕು ಡೈಲಾಗ್‌ ಅನ್ನೂ ಸಹ ಸಮೀರ್‌ ಹಾಕಿಕೊಂಡಿದ್ದಾರೆ.

“ಧರ್ಮಸ್ಥಳ ಪೊಲೀಸರು ಈ ಪತ್ರದ ನೈಜತೆಯನ್ನು ಪರಿಶೀಲಿಸಲು ಅದರಲ್ಲಿ ಉಲ್ಲೇಖಿಸಿದ್ದ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಎಂಬವರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ವ್ಯಕ್ತಿಯೋರ್ವ ತಮ್ಮ ಬಳಿ ಬಂದು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಥ ಕೃತ್ಯಗಳ ಬಗ್ಗೆ ತನಗೆ ಮಾಹಿತಿಯಿರುವುದಾಗಿಯೂ, ತಾನು ಧರ್ಮಸ್ಥಳ ಪೊಲೀಸ್ ಠಾಣೆಗೆ ಶರಣಾಗಿ ಮಾಹಿತಿ ನೀಡಲು ಸಿದ್ಧನಿರುವುದಾಗಿ ತಿಳಿಸಿದ್ದಾನೆ ಎಂದು ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಆ ವ್ಯಕ್ತಿಗೆ ಅಗತ್ಯ ಕಾನೂನು ಸುರಕ್ಷತೆಯನ್ನು ಕಲ್ಪಿಸಿದ ಬಳಿಕ ಹಾಜರುಪಡಿಸುವುದಾಗಿ ವಕೀಲರು ಹೇಳಿರುವುದಾಗಿ ಎಸ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ: Mumbai: ತನ್ನನ್ನು ಸಾಕಿ ಬೆಳೆಸಿದ್ದ ಅಜ್ಜಿಗೆ ಕ್ಯಾನ್ಸರ್‌ ಬಂದಿದೆ ಎಂದು ಕಸದ ರಾಶಿಗೆ ಎಸೆದ ಮೊಮ್ಮಗ