HDK: ‘ಆ ಮಂತ್ರಿಯನ್ನು ಪಕ್ಕದಲ್ಲೇ ಕೂರಿಸಿಕೊಳ್ತಾರಲ್ಲ, ಸಿದ್ದರಾಮಯ್ಯಗೆ ನಾಚಿಕೆಯ ಆಗಲ್ವಾ?’ – ಕುಮಾರಸ್ವಾಮಿ ಹೀಗೆ ಹೇಳಿದ್ದು ಯಾರಿಗೆ

Share the Article

HDK: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಕಮೀಶನ್ ವ್ಯವಹಾರದ ಬಗ್ಗೆ 224 ಶಾಸಕರಿಗೂ ಗೊತ್ತಿರುವ ವಿಷಯವೇ ಆಗಿದೆ. ಈ ಮುಖ್ಯಮಂತ್ರಿಗೆ ಮಾನ‌ ಮರ್ಯಾದೆ ಎನ್ನುವುದು ಇದೆಯಾ? ಅಂತಹ ಭ್ರಷ್ಟ ಮಂತ್ರಿಯನ್ನು ಪಕ್ಕದಲ್ಲಿಯೇ ಕೂರಿಸಿಕೊಳ್ಳುತ್ತಾರಲ್ಲ. ಅವರಿಗೆ ನಾಚಿಕೆಯ ಇಲ್ಲ ಬಿಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಹಾಗಿದ್ದರೆ ಕುಮಾರಸ್ವಾಮಿ ಯಾರ ಕುರಿತು ಹೀಗೆ ಹೇಳಿದ್ದು ಗೊತ್ತಾ?

 

ಹೌದು ನೀವು ಈಗಾಗಲೇ ಊಹಿಸಿರಬಹುದು. ಕುಮಾರಸ್ವಾಮಿ ಹೇಳಿದ್ದು ಜಮೀರ್ ಅಹಮದ್ ಖಾನ್ ಅವರ ಕುರಿತಾಗಿಯೇ. ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಬಿಆರ್‌ ಪಾಟೀಲ್‌ ಹಾಗೂ ಜಮೀರ್‌ ಅಹ್ಮದ್‌ ಖಾನ್‌ ಆಡಿಯೊ ವಿವಾದದ ಕುರಿತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ( hd kumaraswamy ) ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

 

ಈ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿ ಕುಮಾರಸ್ವಾಮಿ ಸರ್ಕಾರ ಅಕ್ರಮ ನಡೆದಿಲ್ಲ ಎನ್ನುವುದನ್ನು ಬಿಟ್ಟರೆ ಎನ್ನೇನು ಹೇಳಲು ಸಾಧ್ಯ? ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲ 224 ಶಾಸಕರಿಗೂ ಗೊತ್ತಿದೆ, ಶಾಸಕರ ಕ್ಷೇತ್ರಕ್ಕೆ ಹಣ ತೆಗೆದುಕೊಂಡು ಹೋಗಬೇಕು ಎಂದರೆ ಎಲ್ಲ ಇಲಾಖೆಯಲ್ಲೂ ಪೇಮೆಂಟ್‌ ಆಗಲೇಬೇಕು, ನಾಚಿಕೆ ಇಲ್ಲ ಸಿದ್ದರಾಮಯ್ಯಗೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಜಮೀರ್‌ಗೆ ಟಾಂಗ್‌ ಕೊಟ್ಟರು.

 

ಅಲ್ಲದೆ ಗಣಿಗಾರಿಕೆ ಬಗ್ಗೆ ತನಿಖೆ ಮಾಡುವಂತೆ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ‌. ಪಾಟೀಲ್ ಅವರು ಪತ್ರ ಬರೆದಿದ್ದಾರೆ. ಅವರು ಈ ಸರ್ಕಾರದಲ್ಲಿ ಎರಡು ವರ್ಷದಿಂದ ಸಚಿವರಾಗಿದ್ದಾರೆ. ಈಗ ಪತ್ರ ಬರೆದಿದ್ದಾರೆ. ಅವರು ಇಷ್ಟು ದಿನ ಏನು ಮಾಡುತ್ತಿದ್ದರು? 2015 – 16ರಲ್ಲಿ ತನಿಖೆ ನಡೆಸುವಂತೆ ಇದೇ ಹೆಚ್.ಕೆ. ಪಾಟೀಲ್ ಅವರೇ ಶಿಫಾರಸು ಮಾಡಿದ್ದರು. ಆ ವರದಿನಿಟ್ಟುಕೊಂಡು ಅವರು ದಿನವೂ ಪೂಜೆ ಮಾಡುತ್ತಿದ್ದಾರಾ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.

 

 

 

 

ಇದನ್ನೂ ಓದಿ: Kokkada: ನೆಲ್ಯಾಡಿ: ವಿಷ ಸೇವಿಸಿದ ಯುವಕ ಯುವತಿ ಗಂಭೀರ!!

Comments are closed.