ಕೇಂದ್ರ ಸಚಿವ ಸೋಮಣ್ಣ ಕಾಲಿಗೆ ಬಿದ್ದ ಜಿಲ್ಲಾಧಿಕಾರಿ

Share the Article

Hassan: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಭೇಟಿ ನೀಡಿದ ವೇಳೆ ಹಾಸನದ ನೂತನ ಡಿಸಿ ಕೆಎಸ್ ಲತಾಕುಮಾರಿಯವರು ಕೇಂದ್ರ ಮಂತ್ರಿ ಸೋಮಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ಕೇಂದ್ರ ಸಚಿವರು ಸ್ವಾಮೀಜಿ ಭೇಟಿಗೆ ಆಗಮಿಸುತ್ತಲೇ ನೂತನ ಡಿಸಿ ಕೆಎಸ್ ಲತಾಕುಮಾರಿಯವರು (KS Lathakumari) ಕೇಂದ್ರ ಸಚಿವ ಸೋಮಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಬಳಿಕ ಜಿಲ್ಲಾಧಿಕಾರಿಯವರು, ‘ಸರ್ ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು. ನೀವು ನಮಗೆ ಬಹಳ ಬೇಕಾದವರು’ ಎಂದು ಹೇಳಿದ್ದು ವರದಿಯಾಗಿದೆ.

ಪ್ರತಿಯಾಗಿ ಡಿಸಿ ಸೋಮಣ್ಣನವರು, ‘ನೀವು ಒಳ್ಳೆಯ ಕೆಲಸಗಾರರು. ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಬೇಲೂರು- ಹಾಸನ ಮಧ್ಯೆ 503 ಎಕರೆ ಭೂ ಸ್ವಾಧೀನ ಮಾಡಬೇಕು. ಇದು ನಿಮ್ಮ ಅವಧಿಯಲ್ಲೇ ಆಗಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಿಮ್ಮ ಆದೇಶ ಖಂಡಿತಾ ಆಗುತ್ತೆ ಸರ್ ಎಂದರು.

ಇದನ್ನೂ ಓದಿ:ಇರಾನ್ ಪರಮಾಣು ಕೇಂದ್ರದ ಮೇಲೆ ಅಮೆರಿಕಾ ಬಾಂಬ್ ದಾಳಿ

Comments are closed.