Home News Scholarship: ವಿದೇಶಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ!

Scholarship: ವಿದೇಶಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ!

Scholarship for ITI, Diploma Students
Image source: Indiafilings

Hindu neighbor gifts plot of land

Hindu neighbour gifts land to Muslim journalist

Scholarship: 2025-26 ಸಾಲಿಗೆ ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ವಿದೇಶಿ ವಿದ್ಯಾರ್ಥಿವೇತನ (Scholarship) ಯೋಜನೆಯಡಿ ಸೇವಾಸಿಂಧು ಪೋರ್ಟಲ್‍ನ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

2025-26 ನೇ ಸಾಲಿಗೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾರ್ಥಿವೇತನ ನೀಡಲು ಸೇವಾಸಿಂಧು ಪೋರ್ಟಲ್‍ನ (https://sevasindhu.karnataka.gov.in/Sevasindhu/DepartmentServices) ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಮಾಹಿತಿ ಕೇಂದ್ರ, ಸೋಮವಾರಪೇಟೆ ದೂರವಾಣಿ ಸಂಖ್ಯೆ 8548068519, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನಾ ಆಜಾದ್ ಭವನ, ಎಫ್.ಎಂ.ಸಿ.ಕಾಲೇಜು ಹತ್ತಿರ, ಮಡಿಕೇರಿ, ಕೊಡಗು ಜಿಲ್ಲೆ 9972799091 ಹಾಗೂ ತಾಲ್ಲೂಕು ಮಾಹಿತಿ ಕೇಂದ್ರ ವಿರಾಜಪೇಟೆ ದೂ.ಸಂ. 9900731037 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:Mangaluru: ಮಂಗಳೂರು: ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ನಿಧನ