IPL: ಐಪಿಎಲ್ 2025 : ಉಳಿದಿರುವ ಪಂದ್ಯಗಳಿಗೆ ದಿನಾಂಕ ಫಿಕ್ಸ್!

Share the Article

IPL: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ IPL 2025 ಪಂದ್ಯಾವಳಿ ಪುನರಾರಂಭಗೊಳ್ಳಲಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಮಾಡಿದೆ.

ಸರ್ಕಾರ, ಭದ್ರತಾ ಏಜೆನ್ಸಿಗಳು ಮತ್ತು ಎಲ್ಲಾ ಪ್ರಮುಖ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಬಾರಿಯ ಟೂರ್ನಿಯ ಉಳಿದಿರುವ ಪಂದ್ಯಗಳನ್ನು ಪುನರ್ ಆರಂಭಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಆರು ಕ್ರೀಡಾಂಗಣಗಳಲ್ಲಿ ಒಟ್ಟು 17 ಪಂದ್ಯಗಳು ನಡೆಯಲಿವೆ. ಮೇ 17 ರಂದು ಬೆಂಗಳೂರಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಿನ ಪಂದ್ಯದೊಂದಿಗೆ ಬಾಕಿ ಉಳಿದಿರುವ ಪಂದ್ಯಗಳು ಪುನರಾರಂಭವಾಗಲಿದೆ.

ಮೇ 29 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು ಮೇ 30 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.

ಜೂನ್ 1 ಎರಡನೇ ಕ್ವಾಲಿಫೈಯ‌ರ್ ಪಂದ್ಯ ಹಾಗೂ ಜೂನ್ 3 ರಂದು ಫೈನಲ್‌ ಪಂದ್ಯ ನಡೆಯಲಿದೆ.

Comments are closed.