Result: ಅಕ್ಕ ಎಸ್ಸೆಸ್ಸೆಲ್ಸಿ 2ನೇ ರಾಂಕ್, ತಂಗಿ ಪಿಯುಸಿಯಲ್ಲಿ ರಾಜ್ಯಕ್ಕೇ ಪ್ರಥಮ ರಾಂಕ್!

ಮಂಗಳೂರು: ಇಂದು ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಅಮೂಲ್ಯ ಕಾಮತ್ 599 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಮಂಗಳೂರಿನ ವೆಸ್ಲಾಕ್ ಆಸ್ಪತೆಯ ತಜ್ಞ ವೈದ್ಯರಾಗಿರುವ ಡಾ. ದಿನೇಶ್ ಕಾಮತ್ ಮತ್ತು ಬಿ.ಸಿ.ರೋಡಿನಲ್ಲಿ ಮಕ್ಕಳ ತಜ್ಞ ವೈದ್ಯರಾಗಿರುವ ಡಾ. ಅನುರಾಧಾ ಕಾಮತ್ ರ ಇಬ್ಬರು ಹೆಣ್ಣುಮಕ್ಕಳು ಕೂಡಾ ರಾಂಕ್ ವಿಜೇತರು.
ಇಂದು ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಅಮೂಲ್ಯ ಕಾಮತ್ 599 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಈ ಹಿಂದೆ 2019ರಲ್ಲಿ ಈಕೆಯ ಅಕ್ಕ ಅನುಪಮಾ ಕಾಮತ್ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿ ಗಮನ ಗಳಿಸಿದ್ದರು.
Comments are closed.