Lakshman Savadi: ಕಾಂಗ್ರೆಸ್ ಗೆ ‘ಹಸ್ತದ ಚಿಹ್ನೆ’ ನೀಡಿದ್ದು ಬೆಳಗಾವಿಯ ‘ಜೈನ ಮುನಿ’ – ಶಾಸಕ ಲಕ್ಷ್ಮಣ್ ಸವದಿ ಹೇಳಿಕೆ!!

Share the Article

Lakshman Savadi: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜೈನಮುನಿಯೊಬ್ಬರು ಕಾಂಗ್ರೆಸ್ ಗೆ ಹಸ್ತದ ಚಿಹ್ನೆಯನ್ನು ಗುರುತಾಗಿ ಸ್ವೀಕರಿಸಲು ಇಂದಿರಾಗಾಂಧಿಯವರಿಗೆ ಸೂಚಿಸಿದರು ಎಂಬುದಾಗಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ‘ಹಸ್ತ’ದ ಚಿಹ್ನೆಯನ್ನೇ ಬಳಸುವಂತೆ ಇಂದಿರಾಗಾಂಧಿಯವರಿಗೆ ಸೂಚಿಸಿದವರು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಜೈನ ಮುನಿ ವಿದ್ಯಾನಂದ ಮಹಾಮುನಿಗಳು. ಅವರು ಕಾಂಗ್ರೆಸ್‌ಗೆ ಹಸು ಕರು ಚಿಹ್ನೆ ಮುಂದುವರಿಸುವುದು ಬೇಡ, ಹಸ್ತ ಇಟ್ಟುಕೊಳ್ಳಿ; ಪಕ್ಷ ಅಭಿವೃದ್ಧಿ ಹೊಂದುತ್ತದೆ ಎಂದು ಸಲಹೆ ನೀಡಿದ್ದರು. ಬಳಿಕ ಇಂದಿರಾಗಾಂಧಿಯವರು ಅದನ್ನು ಪಾಲಿಸಿದರು ಎಂದು ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಲ್ಲದೆ ಅಲ್ಪಸಂಖ್ಯಾತರಲ್ಲೇ ಅತಿ ಕಡಿಮೆ ಜನ ಸಂಖ್ಯೆ ಇರುವ ಜೈನ ಸಮುದಾಯದ ಅಭಿವೃದ್ಧಿಗೆ ರಾಜ್ಯದಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಜೈನ ಸಮುದಾಯ ಅತ್ಯಂತ ಸಾತ್ವಿಕ ಸಮುದಾಯ. ಈ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌ ಸ್ಥಾಪಿಸಬೇಕು. ಇವರು ಈರುಳ್ಳಿ- ಬೆಳ್ಳುಳ್ಳಿ ಸಹಿತ ಸೇವಿಸುವುದಿಲ್ಲ. ಅವರ ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳಿಗೆ ಬೆಲೆ ಕೊಡಬೇಕು ಎಂದರು.

Comments are closed.