Kumbamela : ಭಕ್ತರಿಗಾಗಿ ತಯಾರಿಸಿದ ಅಡುಗೆಗೆ ಭೂದಿ ಎರಚಿದ ಪೊಲೀಸ್!!

Kumbamela : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜನವರಿ 13 ರಿಂದ ಮಹಾ ಕುಂಭ ಮೇಳ ಆರಂಭಗೊಂಡಿದ್ದು ದೇಶದಾದ್ಯಂತ ಕೋಟ್ಯಾಂತರ ಭಕ್ತರು ಈ ಒಂದು ಪುಣ್ಯ ಸ್ಥಳಕ್ಕೆ ಬಂದು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈ ವೇಳೆ ಪೊಲೀಸ್ ಪೇದೆಯಿಂದ ದೊಡ್ಡ ಪ್ರಮಾಣದ ಒಂದು ನಡೆದಿದ್ದು, ಭಕ್ತರಿಗಾಗಿ ತಯಾರಿಸಿದ ಅಡುಗೆಗೆ ಈ ಭೂಪ ಬೂದಿ ಎರಚಿದ್ದಾನೆ.
ಹೌದು, ಪೊಲೀಸ್ ಅಧಿಕಾರಿ ಭಕ್ತರಿಗೆಂದು ತಯಾರಿಸಲಾದ ಅಡುಗೆಗೆ ಬೂದಿ ಎರಚುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದಾನೆ. ಪೊಲೀಸ್ ಅಧಿಕಾರಿಯ ಕೃತ್ಯ ಅಲ್ಲಿದ್ದ ವ್ಯಕ್ತಿಯೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ವಿಡಿಯೋ ಅನ್ನು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಶೇರ್ ಮಾಡಿಕೊಂಡಿದ್ದು, ಇದೀಗ ಕೃತ್ಯ ಎಸಗಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಜೊತೆಗೆ ಘಟನೆ ಕುರಿತು ತನಿಖೆ ನಡೆಸಲು ಆದೇಶ ನೀಡಿರುವುದಾಗಿ ಹೇಳಲಾಗಿದೆ.
Comments are closed.