Davangere : ವಿದ್ಯಾರ್ಥಿನಿಯೊಂದಿಗೆ ಮೆಡಿಕಲ್ ಶಾಪ್ ಮಾಲಿಕನ ರಾಸಲೀಲೆ – ವಿಡಿಯೋ ವೈರಲ್

Davangere : ಶಾಲಾ ವಿದ್ಯಾರ್ಥಿನಿಯೊಂದಿಗೆ ಮೆಡಿಕಲ್ ಶಾಪ್ ಮಾಲೀಕನೊಬ್ಬ ನಡೆತಿದ ರಾಸಲೀಲೆಯ ವಿಡಿಯೋ ಒಂದು ವೈರಲ್ ಆಗಿದ್ದು ಈ ಬೆನ್ನಲ್ಲೇ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೌದು, ದಾವಣಗೆರೆಯ ಚೆನ್ನಗಿರಿಯಲ್ಲಿ ದೇವರಾಜ್ ಅರಸ್ ಲೇ ಔಟ್ ನ ಅಮ್ಜದ್ ಮೆಡಿಕಲ್ ಶಾಪ್ ನಡೆಸುತ್ತಿದ್ದ. ಇದೀಗ ಅಮ್ಜದ್ ಶಾಲಾ ವಿದ್ಯಾರ್ಥಿನಿಯೊಂದಿಗೆ ರಾಸಲೀಲೆ ನಡೆಸುವ ವಿಡಿಯೋ ವೈರಲ್ ಆಗಿದೆ. ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಸುಮಟೋ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಂದಹಾಗೆ ಈ ಆರೋಪಿ ಚನ್ನಗಿರಿ ಬಸ್ ನಿಲ್ದಾಣ ಸಮೀಪ ಅಮರ್ ಮೆಡಿಕಲ್ ಶಾಪ್ ಅನ್ನು ಕಳೆದ ಕೆಲ ವರ್ಷಗಳಿಂದ ನಡೆಸುತ್ತಿದ್ದ. ಇಲ್ಲಿಗೆ ಬರುತ್ತಿದ್ದ ಶಾಲಾ ವಿದ್ಯಾರ್ಥಿನಿಯರು, ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ. ಇದೀಗ ಚನ್ನಗಿರಿಯಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿ ಜೊತೆ ರಾಸಲೀಲೆ ನಡೆಸಿರುವ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಈ ವಿಡಿಯೋ ಸ್ನೇಹಿತರಿಗೆ ಆರೋಪಿ ಅಮ್ಜದ್ ಕಳುಹಿಸಿದ್ದ ಎನ್ನಲಾಗಿದೆ. ಈ ವಿಡಿಯೋ ಚನ್ನಗಿರಿ ತಾಲೂಕಿನ ಕೆಲವೆಡೆ ವೈರಲ್ ಕೂಡ ಆಗಿತ್ತು.

ಇನ್ನು ಅಮ್ಜದ್ ನಡೆಸಿದ್ದ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಯೇ ವಿಡಿಯೋ ವೈರಲ್ ಮಾಡಿದ್ದ ಎನ್ನಲಾಗಿದೆ. ಇದು ಸ್ಥಳೀಯರನ್ನು ಕೆರಳುವಂತೆ ಮಾಡಿತ್ತು. ಆದ್ರೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟುವ ಮೂಲಕ ಚಾಕಚಕ್ಯತೆ ತೋರಿದ್ದಾರೆ. ಪೊಲೀಸರು ಸುಮಟೋ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Comments are closed.