Mangaluru : ಪ್ರೇತ ಉಚ್ಚಾಟನೆಗೆ ನಗರದ ಪ್ರಮುಖ ರಸ್ತೆ ಬಂದ್ !! ಅಷ್ಟಕ್ಕೂ ಆಗಿದ್ದೇನು?

Share the Article

Mangaluru : ಪ್ರೇತ ಉಚ್ಚಾಟನೆಗೆ ನಗರದ ರಸ್ತೆಯನ್ನು ಬಂದ್ ಮಾಡಿದಂತಹ ವಿಚಿತ್ರ ಪ್ರಕರಣ ಒಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಪ್ರೇತ ಉಚ್ಚಾಟನೆ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು, ನಗರದ ಕೊಟ್ಟಾರದಲ್ಲಿರುವ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಬಳಿ ರಣಕಾಳಿ ಹಾಗೂ ಬ್ರಹ್ಮರಾಕ್ಷಸ ಅನ್ಯಪ್ರೇತ ಉಚ್ಚಾಟನೆ ಹಿನ್ನೆಲೆ ಕೊಟ್ಟಾರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾಡದಂತೆ ಸೂಚಿಸಿ ಬ್ಯಾನರ್‌ ಅಳವಡಿಸಲಾಗಿದೆ. ಹೀಗಾಗಿ ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 3 ಗಂಟೆಯವರೆಗೆ ಜನರು ಓಡಾಡದಂತೆ ಮನವಿ ಮಾಡಲಾಗಿತ್ತು. ಸದ್ಯ ಪ್ರೇತ ಉಚ್ಚಾಟನೆ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೈವ ಆರಾಧಕ ಪ್ರಜ್ವಲ್ ಹೇಳಿದ್ದೇನು?
ದೈವಸ್ಥಾನ ಜೀರ್ಣೋದ್ಧಾರ ಮಾಡುವ ಸಲುವಾಗಿ ತಾಂಬೂಲ ಪ್ರಶ್ನೆ ಕೇಳಲಾಯಿತು. ಆಗ ಈ ಪ್ರದೇಶದಲ್ಲಿ ರಾಕ್ಷಸ, ಪ್ರೇತಾತ್ಮಗಳಿರುವುದು ಕಂಡು ಬಂದಿತ್ತು. ದೈವಸ್ಥಾನದ ಜೀರ್ಣೋದ್ಧಾರಕ್ಕೂ ಮೊದಲು ಈ ಪ್ರೇತಾತ್ಮಗಳ ಉಚ್ಚಾಟನೆ ಆಗಬೇಕು ಎಂದು ಬಂದಿತ್ತು. ಅಮವಾಸ್ಯೆ ರಾತ್ರಿ 12 ಗಂಟೆ ವೇಳೆಗೆ ಪ್ರೇತಾತ್ಮ ಉಚ್ಚಾಟಣೆ ನಡೆಯಲಿದೆ. ಆಗ ಸುತ್ತಮುತ್ತ ಉಚ್ಚಾಟನೆ ವಿಧಿ ವಿಧಾನ ನಡೆಯುತ್ತೆ ಎಂದು ಹೇಳಿದ್ದರು.

ಅಲ್ಲದೆ ಮಂಗಳೂರು ಪೊಲೀಸ್ ಇಲಾಖೆಗೂ ಆಯೋಜಕರು ಮನವಿ ಮಾಡಲಾಗಿತ್ತು. ಸುಮಾರು 3-4 ಕಿಮೀ ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರವನ್ನು ನಿಷೇಧಿಸಿದ್ದು, ಅಂದರೆ ಸುಮಾರು ಐದು ಗಂಟೆಗಳ ಕಾಲ ಮಂಗಳೂರಿನ ಪ್ರಮುಖ ರಸ್ತೆ ಕೊಟ್ಟಾರ ಬಂದ್ ಆಗಿತ್ತು ಎನ್ನಲಾಗಿದೆ.

Comments are closed.