Dakshina Kannada: ಬ್ಯಾಂಕ್‌ ದರೋಡೆ ಪ್ರಕರಣ; ಜನರ ಆತಂಕ, ಚಿನ್ನ ವಾಪಸು ಕೊಡುವಂತೆ ಗ್ರಾಹಕರ ಒತ್ತಡ!

Share the Article

Dakshina Kannada: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ.ರೋಡ್‌ ಶಾಖೆ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚಿನ್ನ ಅಡ ಇಟ್ಟಿರುವ ಗ್ರಾಹಕರು ಶಾಕ್‌ಗೊಳಗಾಗಿದ್ದು, ಶನಿವಾರ ಬೆಳಗ್ಗೆ ಬ್ಯಾಂಕ್‌ಗೆ ಮುಗಿ ಬಿದ್ದಿದ್ದು, ನಮ್ಮ ಚಿನ್ನ ವಾಪಸ್‌ ಕೊಡಿ ಎಂದು ಒತ್ತಾಯ ಮಾಡಿದ್ದಾರೆ.

ಮನೆ ಖರೀದಿ, ಮಕ್ಕಳನ್ನು ವಿದೇಕ್ಕೆಂದು ಕಳುಹಿಸಲು ಈ ರೀತಿ ನಾನಾ ಕಾರಣಗಳಿಗೆ ಚಿನ್ನ ಅಡವಿಟ್ಟು ಹಣ ಪಡೆದಿದ್ದೇವೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದರು. ಕಳೆದ ಬಾರಿ ಈ ಬೆಂಕಿನಲ್ಲಿ ಚಿನ್ನ ಕಳೆದುಕೊಂಡ ಸಮಯದಲ್ಲಿ ಯಾವುದೇ ಪರಿಹಾರ ನೀಡಿರಲಿಲ್ಲ, ಆದರೆ ಈ ಬಾರಿ ಹಾಗೆ ಆಗಬಾರದು ಎಂದು ಆಗ್ರಹ ಮಾಡಿದ್ದಾರೆ.

ಗ್ರಾಹಕರ ಚಿನ್ನ ವಾಪಸು ನೀಡುತ್ತೇವೆ ಎಂದು ಬ್ಯಾಂಕ್‌ ಅಧ್ಯಕ್ಷ ಕೃಷ್ಣ ಶೆಟ್ಟಿ ಹೇಳಿದ್ದಾರೆ.

ನಗ, ನಗದು ದರೋಡೆ ಮಾಡಿ ಒಂದು ಕಾರಿನಲ್ಲಿ ಹೊರಟಿದ್ದು, ಕಾರನ್ನು ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲಿಸಿ, ಒಂದೇ ಕಾರಿನಲ್ಲಿ ಕೆ.ಸಿ.ರೋಡ್‌ಗೆ ತೆರಳಿ, ಕೃತ್ಯ ಮುಗಿಸಿ ನಾಲ್ವರನ್ನು ತಲಪಾಡಿ ಬಳಿ ಪಾರ್ಕ್‌ ಮಾಡಿದ್ದ ಕಾರಿನ ಬಳಿ ಇಳಿಸಿರುವ ಕುರಿತು ಸಂಶಯವಾಗಿದೆ. ನಂತರ ದರೋಡೆ ಮಾಡಿದ ಚಿನ್ನದ ಗೋಣಿಗಳ ಜೊತೆ ಇಬ್ಬರು ತಲಪಾಡಿ ಟೋಲ್‌ ಮೂಲಕ ಕೇರಳಕ್ಕೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗಿದೆ.

 

Comments are closed.