Actor Ajith: ದುಬೈನ ರೇಸಿಂಗ್ ಟ್ರ್ಯಾಕ್ ಮೇಲೆ ನಟ ಅಜಿತ್ ಕುಮಾರ್ ಕಾರು ಡಿಕ್ಕಿ; ವಿಡಿಯೋ ವೈರಲ್, ತಲೆ ಉಳಿಸಿಕೊಡ ತಲಾ ಅಜಿತ್‌

Actor Ajith: ತಮಿಳು ನಟ ಅಜಿತ್‌ ನಟನೆಯಲ್ಲಿ ಮಾತ್ರವಲ್ಲದೇ ಓರ್ವ ರೇಸರ್‌ ಆಗಿಯೂ ಗುರುತಿಸಿಕೊಂಡವರು. ಆದರೆ ಮಂಗಳವಾರ ಸಂಜೆ ಅಜಿತ್‌ ಅವರು ಚಲಾಯಿಸುತ್ತಿದ್ದ ರೇಸಿಂಗ್‌ ಕಾರು ಭೀಕರ ಅಪಘಾತವಾಗಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

 

ಅಜಿತ್‌ ಅವರು ಸ್ಪೋರ್ಟ್ಸ್‌ ಮ್ಯಾನ್‌. ಈ ಬಾರಿ ದುಬೈ ಕಾರ್‌ರೇಸ್‌ ಗ್ರ್ಯಾಂಡ್‌ ಪ್ರಿಕ್ಸ್‌ಗಾಗಿ ಅವರು ತಯಾರಿ ಮಾಡುತ್ತಿದ್ದರು. ಜನವರಿ 9 ರಿಂದ ದುಬೈನಲ್ಲಿ ಈ ರೇಸ್‌ ಶುರುವಾಗುವುದಿತ್ತು. ಈ ತಯಾರಿಯಲ್ಲಿದ್ದಾಗಲೇ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಕಾರು ಸ್ಕಿಡ್‌ ಆಗಿ ಗಿರಗಿರನೇ ತಿರುಗುತ್ತಿರುವಾಗಲೇ ರಕ್ಷಣಾ ಕಾರ್ಯಕರ್ತರು ಧಾವಿಸಿದ್ದಾರೆ. ಆದರೆ ನಟ ಯಾವುದೇ ಅಪಾಯವಿಲ್ಲದೇ ಗಾಡಿಯಿಂದ ಹೊರಗೆ ಬಂದಿದ್ದಾರೆ.

ಕಾರ್ ರೇಸಿಂಗ್ ಪ್ರಾಕ್ಟೀಸ್‌ನಲ್ಲಿ ನಟ ಅಜಿತ್ ಕುಮಾರ್ ದುಬೈನಲ್ಲಿ 24 ಗಂಟೆಗಳ ಓಟಕ್ಕೆ ತಯಾರಿ ನಡೆಸುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ನಟನ ಕಾರು ಅಪಘಾತದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಅಪಘಾತದ ವೇಳೆ ನಟನ ಕಾರು ಛಿದ್ರಗೊಂಡಿದೆ. ಆದರೆ, ಈ ಅವಘಡದಿಂದ ನಟ ಸುರಕ್ಷಿತವಾಗಿ ಪಾರಾಗಿದ್ದಾರೆ. ಅವಘಡದ ನಂತರ ಕಾರು ನಿಲ್ಲಿಸಿ ನಂತರ ಅಜಿತ್ ಕುಮಾರ್ ಅವರನ್ನು ಕಾರಿನಿಂದ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

Comments are closed, but trackbacks and pingbacks are open.