Pramod Mutalik: ‘ರಾಜ್ಯದಲ್ಲಿ ಯಾರಾದರೂ ನ್ಯೂ ಇಯರ್ ಸೆಲೆಬ್ರೇಶನ್ ಮಾಡಿದರೆ ನುಗ್ಗಿ ಹೊಡೆಯುತ್ತೇವೆ’ – ಪ್ರಮೋದ್ ಮುತಾಲಿಕ್

Pramod Mutalik: ರಾಜ್ಯದಲ್ಲಿ ಯಾರಾದರೂ ನ್ಯೂ ಇಯರ್ ಸೆಲೆಬ್ರೇಶನ್ ಮಾಡಿದರೆ ಹೊಕ್ಕಿ ಹೊಡೆಯುತ್ತೇವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಅಚ್ಚರಿಯ ಹೇಳಿಕೆ.

 

ಹೌದು, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಅವರು ನಿಧನರಾಗಿದ್ದು 26ರಿಂದ ಜ.1ರವರೆಗೆ ಕೇಂದ್ರ, ರಾಜ್ಯ ಸರ್ಕಾರ ಶೋಕಾಚರಣೆ ಘೋಷಿಸಿದೆ. ಹೀಗಿರುವಾಗ ಇಡೀ ಕರ್ನಾಟಕದಲ್ಲಿ ಲಾಡ್ಜ್​, ಹೋಟೆಲ್, ಪಬ್​ಗಳಲ್ಲಿ ಹೊಸ ವರ್ಷ ಹೇಗೆ ಆಚರಣೆ ಮಾಡುತ್ತೀರಿ. ಆಚರಿಸಿದರೆ ಹೊಕ್ಕಿ ಹಿಂದೂ ಸಂಘಟಕರು ಹೊಡೆಯುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಇನ್ನು ಹೊಸ ವರ್ಷವನ್ನು ಡಿ.31ರ ರಾತ್ರಿ 12 ಗಂಟೆಗೆ ಸ್ವಾಗತ ಮಾಡುತ್ತಾರೆ. ಕುಡಿದು, ಕುಪ್ಪಳಿ ಡ್ರಗ್, ರೇಪ್, ಮರ್ಡರ್, ಹೊಡೆದಾಟಗಳು, ಹುಡುಗಿಯರನ್ನು ಕೆಡಿಸುವುದು ಈ ರೀತಿ ಅಶ್ಲೀಲ, ಅಸಭ್ಯವಾಗಿ ವೆಲ್​​​ಕಮ್ ಮಾಡುವುದು ನಿಲ್ಲಿಸಲೇಬೇಕು. ಈ ಆಚರಣೆ ವಿರುದ್ಧ ನಾವು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಜೊತೆಗೆ ಪಂಚಾಂಗ ಪ್ರಕಾರ, ವೈಜ್ಞಾನಿಕವಾಗಿ ಯುಗಾದಿ ಅತ್ಯಂತ ಸಮರ್ಪಕವಾದ ಹೊಸ ಹಬ್ಬವಾಗಿದೆ. ಕ್ರಿಶ್ಚಿಯನ್ನುರು, ಬ್ರಿಟೀಷರು ಹಾಕಿರುವ ಈ ಪರಂಪರೆಯುವ ಜ,1ರಂದು ಹೊಸ ವರ್ಷ ಎಂದು ಹೇಳುವುದು ವೈಜ್ಞಾನಿಕವಲ್ಲ. ಇದನ್ನು ಆಚರಿಸುವುದು ಖಂಡನೀಯ, ಈ ಆಚರಣೆಯನ್ನು ನಿಲ್ಲಿಸಬೇಕು. ಕೂಡಲೇ ಈ ಆಚರಣೆಗೆ ಸರ್ಕಾರ ಬ್ರೇಕ್ ಹಾಕಬೇಕು. ಇಲ್ಲವಾದಲ್ಲಿ ನಾವೇ ವಿರೋಧಿ ಮುಂದಾಗಿ ನಿಲ್ಲಿಸುತ್ತೇವೆ ಎಂದರು.

Leave A Reply

Your email address will not be published.