Bigg Boss: ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ದೆವ್ವ – ಗಡಗಡ ನಡುಗಿದ ಕಂಟೆಸ್ಟೆಂಟ್ಸ್, ಅಚ್ಚರಿ ವಿಡಿಯೋ ವೈರಲ್

Bigg Boss: ಬಿಗ್​ಬಾಸ್​ ಮನೆಯಲ್ಲಿ ಆಗಿಂದಾಗೆ ದೆವ್ವ ಇರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿರುತ್ತವೆ. ಅದಕ್ಕೆ ಪೂರಕವೆಂಬಂತೆ ಲೋಟ, ತಟ್ಟೆಗಳು ತನ್ನಿಂದ ತಾನೆ ಬೀಳುತ್ತಿರುತ್ತವೆ, ಬಹುತೇಕ ಪ್ರತಿ ಸೀಸನ್​ನಲ್ಲಿಯೂ ಇದು ನಡೆಯುತ್ತಲೇ ಬಂದಿದೆ. ಅಂತೆಯೇ ಇದೀಗ ಈ ಸೀಸನ್ನಲ್ಲೂ ದೆವ್ವದ ಇರುವವಿಕೆ ಕಂಡು ಬಂದಿದೆ..!!

ಯಸ್, ಬಿಗ್​ಬಾಸ್​(Bigg Boss)ಮನೆಯಲ್ಲಿ ದೆವ್ವದ ಕಾಟ ಶುರುವಾಗಿದ್ದು, ಸ್ಫರ್ಧಿಗಳು ಕಂಗಾಲಾಗಿ ಕೂಗಾಡಲು ಶುರು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋ ಸಖತ್​ ವೈರಲ್​ ಆಗಿದೆ.

ಸದ್ಯ ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ ಬಿಗ್​ಬಾಸ್​ ಮನೆಯಲ್ಲಿ ದೆವ್ವವೊಂದು ಕಾಣಿಸಿಕೊಂಡಿದ್ದು, ಅಡುಗೆಮನೆಯಲ್ಲಿ ಗೌತಮಿ, ಮೋಕ್ಷಿತಾ ಹಾಗೂ ಮಂಜು ಕೂಗಾಡಲು ಶುರು ಮಾಡುತ್ತಾರೆ. ಇದನ್ನು ಕೇಳಿಸಿಕೊಂಡು ಗಾಬರಿಯಿಂದ ಓಡಿ ಬರುವ ಮನೆಯ ಇತರೆ ಸದಸ್ಯರು ದೆವ್ವ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಈ ವೇಳೆ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಚೈತ್ರಾ ನೆಲದ ಮೇಲೆ ಬೀಳುತ್ತಾರೆ. ಇದೇ ವೇಳೆ ಮನೆಯ ಮುಖ್ಯದ್ವಾರದಿಂದ ನೂರು ಜನ್ಮಕ್ಕೂ ಸೀರಿಯಲ್​ ತಾರೆಗಳು ಎಂಟ್ರಿ ಕೊಟ್ಟಿದ್ದು, ಸದ್ಯ ಈ ಪ್ರೋಮೋ ವೈರಲ್​ ಆಗಿದೆ.

Leave A Reply

Your email address will not be published.