Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಗೆ ಜಾಮೀನು
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ದರ್ಶನ್ ಜೊತೆಗೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಕೂಡಾ ಜಾಮೀನು ದೊರಕಿದೆ.
ಕಳೆದ ಆರು ತಿಂಗಳಿನಿಂದ ಜೈಲಿನಲ್ಲಿದ್ದ ಪವಿತ್ರಾಗೌಡ ಜಾಮೀನು ದೊರಕಿದೆ. ಒಟ್ಟಾರೆಯಾಗಿ ನಟ ದರ್ಶನ್, ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್ ಹಾಗೂ ಪ್ರದೂಷ್ ಗೆ ಜಾಮೀನು ಮಂಜೂರಾಗಿದೆ. ಇಂದು ಅಥವಾ ನಾಳೆ ಇವರುಗಳು ಜೈಲಿನಿಂದ ಬಿಡುಗಡೆ ಆಗುತ್ತಾರೆ. ಈಗಾಗಲೇ ನಟ ದರ್ಶನ್ ಮಧ್ಯಂತರ ಜಾಮೀನಿನ ಮೂಲಕ ಹೊರಗಿದ್ದಾರೆ.
ಆರೋಪಿ ನಟ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಥೆರಪಿ ಮೂಲಕ ಚಿಕಿತ್ಸೆ ನಡೆಯುತ್ತಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ. ಇದೀಗ ಜಾಮೀನು ಮಂಜೂರಾಗಿರುವ ಕಾರಣ ನಿಧಾನವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಎಲ್ಲಾ ಆರೋಪಿಗಳು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಆಗಲಿದ್ದಾರೆ. ಇವರಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ 180 ದಿನಗಳ ಕಾಲ ಪರಪ್ಪನ ಜೈಲಿನಲ್ಲಿ ಕಳೆದಿದ್ದು, ಕೊನೆಗೂ ತಾತ್ಕಾಲಿಕ ರಿಲೀಫ್ ದೊರಕಿದೆ. ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಹಲವು ದಿನಗಳಿಂದ ಜಾಮೀನು ಪಡೆಯಲು ಪ್ರಯತ್ನ ಮಾಡುತ್ತಿದ್ದು. ಇದೊಂದು ಗಂಭೀರ ಪ್ರಕರಣವಾಗಿದ್ದರಿಂದ ಜಾಮೀನು ವಿಳಂಬವಾಗಿತ್ತು. ಡಿ.13 (ಇಂದು) ಜಾಮೀನು ದೊರಕಿರುವುದರಿಂದ ಪವಿತ್ರಾ ಗೌಡಗೆ ನಿರಾಳವಾಗಿದ್ದಾರೆ.
ದರ್ಶನ್‌ಗೆ ಮೊದಲು ಅನಾರೋಗ್ಯದ ಕಾರಣದಿಂದ ಮಧ್ಯಂತರ ಜಾಮೀನು ನೀಡಲಾಗಿತ್ತು. ಇದೀಗ ರೆಗ್ಯುಲರ್ ಬೇಲ್ ದೊರಕಿದ ಕಾರಣ ದೊಡ್ಡ ರಿಲೀಫ್ ದೊರಕಿದಂತಾಗಿದೆ ಎನ್ನಬಹುದು.