of your HTML document.

Kannada kotyadhipathi: ಕನ್ನಡದ ಕೋಟ್ಯಾಧಿಪತಿ: ಪುನೀತ್ ರಾಜ್‌ಕುಮಾರ್ ಬದಲಿಗೆ ಹೊಸ ಆಂಕರ್ ಯಾರು?!

Kannada kotyadhipathi: ಹಿಂದಿ ಭಾಷೆಯಲ್ಲಿ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮ ಮೂಡಿ ಬರುತ್ತಿತ್ತು. ಈ ಕಾರ್ಯಕ್ರಮದ ಕನ್ನಡ ವರ್ಷನ್ ‘ಕನ್ನಡದ ಕೋಟ್ಯಾಧಿಪತಿ’. ಹೀಗೆ ಕನ್ನಡದಲ್ಲಿ ಆರಂಭ ಆಗಿದ್ದ ಕನ್ನಡದ ಕೋಟ್ಯಾಧಿಪತಿ (Kannada kotyadhipathi) ಕನ್ನಡಿಗರ ಮನೆ ಮಾತಾಗಿತ್ತು.

ಅಂತೆಯೇ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ನೋಡಲು ನೋಡಲು ಕೋಟಿ ಕೋಟಿ ಕನ್ನಡಿಗರು ಕಾದು ಕೂತಿರುತ್ತಿದ್ದರು. ಆದರೆ, ಪುನೀತ್ ರಾಜ್‌ಕುಮಾರ್ ಅವರ ನೆನಪು ಮಾತ್ರ ಈಗ ಉಳಿದಿದೆ. ಆದ್ರೆ ಸದ್ಯದಲ್ಲೇ ‘ಕನ್ನಡದ ಕೋಟ್ಯಾಧಿಪತಿ’ ಆರಂಭ ಅಗಲಿದ್ದು ಪುನೀತ್ ರಾಜ್‌ಕುಮಾರ್ ಅವರ ಜಾಗಕ್ಕೆ ಹೊಸ ಆಂಕರ್ ಬರಲಿದ್ದಾರೆ. ಅವರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಸದ್ಯ ಇದೀಗ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರೇ ಆಂಕರ್ ಎಂಬ ಸುದ್ದಿ ಹಬ್ಬಿದ್ದು, ರಿಯಾಲಿಟಿ ಶೋಗಳಲ್ಲಿ ಕಿಚ್ಚ ಸುದೀಪ್ ಅವರನ್ನ ಮೀರಿಸುವ ಮತ್ತೊಬ್ಬ ಕನ್ನಡದ ನಿರೂಪಕ ಇಲ್ಲ ಅನ್ನೋದು ಅಭಿಮಾನಿಗಳ ನಂಬಿಕೆ.

ಹೇಳಿ ಕೇಳಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು & ಕನ್ನಡಿಗ ಕಿಚ್ಚ ಸುದೀಪ್ ಅವರು ಜೀವದ ಗೆಳೆಯರು. ಹೀಗಿದ್ದಾಗ, ಪುನೀತ್ ರಾಜ್‌ಕುಮಾರ್ ಅವರು ಬಿಟ್ಟು ಹೋಗಿರುವ ಕಾರ್ಯಕ್ರಮ ಮತ್ತೆ ಶುರು ಮಾಡಲು ಕಿಚ್ಚ ಸುದೀಪ್ ಅವರು ಇದೀಗ ಮುಂದೆ ಬಂದಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಒಟ್ಟಿನಲ್ಲಿ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರೇ ಆಂಕರ್ ಎಂಬ ಸುದ್ದಿ ಹಬ್ಬಿದ್ದರೂ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಳು ಸಿಕ್ಕಿಲ್ಲ. ಹೀಗಾಗಿ ಕುತೂಹಲ ಕೂಡ ಮತ್ತಷ್ಟು ಹೆಚ್ಚಾಗಿದ್ದು. ಇದಕ್ಕೆ ವಿವರಣೆ ಸಿಗಬೇಕು ಅಂದ್ರೆ ಕೆಲ ದಿನಗಳ ಕಾಲ ಫ್ಯಾನ್ಸ್ ಕಾಯಬೇಕಿದೆ.

Leave A Reply

Your email address will not be published.