IPL-2025: ಬರೋಬ್ಬರಿ 20 ಕೋಟಿಗೆ RCB ಪಾಲದ ಕೆ ಎಲ್ ರಾಹುಲ್ !! ಅಭಿಮಾನಿಗಳು ಫುಲ್ ಖುಷ್
IPL-2025: ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿಗೆ ಇನ್ನೂ 14 ದಿನ ಬಾಕಿ ಇದೆ. 1500 ಕ್ಕೂ ಅಧಿಕ ಆಟಗಾರರು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಎಲ್ಲಾ 10 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಲು ತಮ್ಮದೇ ಲೆಕ್ಕಾಚಾರ ಮಾಡಿಕೊಳ್ಳುತ್ತಿವೆ. ಈ ನಡುವೆ ಐಪಿಎಲ್ ಹರಾಜಿಗೆ ಮುನ್ನವೇ ಕನ್ನಡಿಗ ಕೆಎಲ್ ರಾಹುಲ್(K L Rahul)ಬರೋಬ್ಬರಿ 20 ಕೋಟಿ ರೂಪಾಯಿಗೆ ಆರ್ ಸಿಬಿ ಪಾಲಾಗಿದ್ದಾರೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಈ ತಂಡ ಐಪಿಎಲ್ ಆರಂಭದಿಂದಲೂ ಆಡುತ್ತಿದೆ. ಆದರೆ ಇನ್ನೂ ಒಮ್ಮೆಯೂ ಟ್ರೋಫಿಗೆ ಮುತ್ತಿಟ್ಟಿಲ್ಲ. ಸತತ 17 ಆವೃತ್ತಿಗಳಲ್ಲಿ ಮಾಡಲಾಗದ ಸಾಧನೆಯನ್ನು ಮಾಡಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಬಾರಿಯ ಹರಾಜಿನಲ್ಲಿ ಬೆಂಗಳೂರು ತಂಡ ಸ್ಟಾರ್ ಆಟಗಾರರಿಗೆ ಮಣೆ ಹಾಕಲಿದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜು ನವೆಂಬರ್ 24 ರಿಂದ 25ರ ವರೆಗೆ ಸೌದಿ ಅರೆಬಿಯಾದ ಜಿಡಾದಲ್ಲಿ ನಡೆಯುವ ಸಾಧ್ಯತೆ ಇದೆ. ಈ ಹರಾಜಿಗೂ ಮುನ್ನ ಅಭಿಮಾನಿಗಳು ತಮ್ಮ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಐಪಿಎಲ್ ಹರಾಜಿಗೆ ಮುನ್ನವೇ ಕನ್ನಡಿಗ ಕೆಎಲ್ ರಾಹುಲ್ ಬರೋಬ್ಬರಿ 20 ಕೋಟಿ ರೂಪಾಯಿಗೆ ಆರ್ ಸಿಬಿ ಪಾಲಾಗಿದ್ದಾರೆ!
ಹೌದು, 20 ಕೋಟಿ ರೂಪಾಯಿ ಆದರೂ ಪರವಾಗಿಲ್ಲ ಕೆಎಲ್ ರಾಹುಲ್ ಆರ್ ಸಿಬಿಗೆ ಬರಲಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಆರ್ ಸಿಬಿ ಆಯೋಜಿಸಿದ್ದ ಅಣಕು ಹರಾಜಿನಲ್ಲಿ ಕೆಎಲ್ ರಾಹುಲ್‌ರನ್ನು ಬರೋಬ್ಬರಿ 20 ಕೋಟಿ ರೂಪಾಯಿ ನೀಡಿ ಆರ್ ಸಿಬಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಂದಹಾಗೆ ಬೆಂಗಳೂರಿನಲ್ಲಿ ನಡೆದ ಅಣಕು ಹರಾಜಿನಲ್ಲಿ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್‌ಗೆ ಆರ್ ಸಿಬಿ ಅಭಿಮಾನಿಗಳು ತೀವ್ರ ಪೈಪೋಟಿ ನಡೆಸಿದರು. ಕರ್ನಾಟಕದ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್‌ಗಾಗಿ ಭಾರಿ ಪೈಪೋಟಿ ನಡೆದರು ಅಂತಿಮವಾಗಿ ಆರ್ ಸಿಬಿ ಅವರನ್ನು 20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು. ಇದು ಕೆಎಲ್ ರಾಹುಲ್ ಮೇಲೆ ಕನ್ನಡಿಗರು ಇಟ್ಟುಕೊಂಡಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ.