Waqf Board: ಕೊಡಗು: ವಕ್ಫ್ ಬೋರ್ಡ್ ಹೆಸರಲ್ಲಿ ಮುಸ್ಲಿಮರ ದಬ್ಬಾಳಿಕೆ: ಹಿಂದೂ ಮಹಿಳೆಗೆ ಕಿರುಕುಳ!

Waqf Board: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಒಬ್ಬಂಟಿ ಹಿಂದೂ ಮಹಿಳೆಯ ಮನೆಗೆ ನುಗ್ಗಿದ ಕೆಲವು ಮುಸ್ಲಿಂ ವ್ಯಕ್ತಿಗಳು, ಇದು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳಿ ಮನೆ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ.

ಈ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದ ಮುಳ್ಳುಸೋಗೆಯಲ್ಲಿ ನಡೆದಿದೆ. ಮಾಹಿತಿ ಪ್ರಕಾರ, 1984 ರಿಂದಲೂ ಮಹಿಳೆಯ ಕುಟುಂಬದ ಹೆಸರಿನಲ್ಲಿರುವ ಆಸ್ತಿಯ ದಾಖಲೆಗಳಿದ್ದರೂ, ವಕ್ಫ್ ಬೋರ್ಡ್ ಹೆಸರು ಎಲ್ಲಿಯೂ ಉಲ್ಲೇಖವಿಲ್ಲ.

ಆದ್ರೆ ಕೆಲವು ಮುಸ್ಲಿಂ ವ್ಯಕ್ತಿಗಳು ರೇಣುಕಾ ಎಂಬುವರ ಮನೆಗೆ ಬಂದು ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ವಕ್ಫ್ ಬೋರ್ಡ್ ಹೆಸರು ಬಳಸಿಕೊಂಡು ದಬ್ಬಾಳಿಕೆ ನಡೆಸಿದ್ದಾರೆ. ನಾನು ಈ ಮನೆ ಖಾಲಿ ಮಾಡುವುದಿಲ್ಲ, ಇದು ನಮ್ಮ ಆಸ್ತಿ ಎಂದು ಹೇಳಿದ್ದಾರೆ. ನೀವು ಒಪ್ಪಲಿಲ್ಲ ಅಂದರೆ ನಾವು ಖಾಲಿ ಮಾಡಿಸುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಇದಾದ ನಂತರ, ಪುನಃ ಒಂದೆರೆಡು ಬಾರಿ ಮಹಿಳೆ ಫೋನಿಗೆ ಕರೆ ಮಾಡಿ ಮನೆ ಬಿಟ್ಟು ಹೊರಟಿದ್ದೀರಿ ಅಲ್ಲವೇ? ಇಲ್ಲವೆಂದರೆ ನಾವೇ ಖಾಲಿ ಮಾಡಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಈ ಘಟನೆ ಕುರಿತಂತೆ ಮಹಿಳೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಆಸ್ತಿ 1984ರಲ್ಲೇ ಪೂವಮ್ಮ ಪೊನ್ನುಸ್ವಾಮಿ ಅವರು ಖರೀದಿಸಿರುವ ಆಸ್ತಿಯಾಗಿದೆ. ಸರ್ವೇ ನಂಬರ್ 78/2 ರಲ್ಲಿ ಅಂದಿನ ಲೇಔಟಿನ ಆಸ್ತಿ ಎಂಬುದು ದಾಖಲೆಗಳಲ್ಲಿದೆ. ಆಸ್ತಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದೂ ನಮೂದಾಗಿಲ್ಲ. ಇಷ್ಟೆಲ್ಲಾ ಸಾಕ್ಷಿ ಆದರೂ, ಕೆಲವು ಮುಸ್ಲಿಂ ವ್ಯಕ್ತಿಗಳು ಇದು ವಕ್ಫ್ ಬೋರ್ಡ್ ಆಸ್ತಿಯೆಂದು ಸುಳ್ಳು ಹೇಳಿ ಬೆದರಿಕೆ ಹಾಕಿ ಮನೆ ಖಾಲಿ ಮಾಡಿಸಲು ಮುಂದಾಗಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.

ವಕ್ಫ್ ಆಸ್ತಿ ಎಂದು ಹೆಸರು ಇಲ್ಲದಿದ್ದರೂ ಮುಸ್ಲಿಂ ವ್ಯಕ್ತಿಗಳು ಬಂದು ಮನೆ ಖಾಲಿ ಮಾಡಿ ಎಂದು ಬೆದರಿಕೆ ಹಾಕಿದವರನ್ನು ಪತ್ತೆ ಮಾಡಲು ಕುಶಾಲನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.