Punith Rajkumar : ಪುನೀತ್ ರಾಜ್ ಕುಮಾರ್ ಅವರ ಕೊನೆ ಕ್ಷಣದ ವಿಡಿಯೋ ವೈರಲ್ – ಸಾವಿಗೂ ಮುನ್ನ ಅಪ್ಪು ಹೇಳಿದ್ದು, ಮಾಡಿದ್ದು ಏನು?

Punith Rjakumar : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀರಿಕೊಂಡು ಇಂದಿಗೆ ಮೂರು ವರ್ಷವಾಗಿದೆ. ಸದಾ ನಗುಮೊಗದ ಅಪ್ಪುವನ್ನು ಕರುನಾಡ ಜನ ಯಾವತ್ತೂ ಮರೆಯಲ್ಲ. ಕರುನಾಡ ಜನರ ಪ್ರೀತಿಯ ಅಪ್ಪು ಅಗಲಿ ಇದೀಗ ಮೂರು ವರ್ಷ. ಪುನೀತ್‌ ಆ ನಗು ಮಾತ್ರ ಇಂದಿಗೂ ಯಾರ ಕಣ್ಣಿಂದಲೂ ಮರೆಯಾಗಿಲ್ಲ. ಪುನೀತ್‌(Punith Rajkumar)ಸಾವಿನ ಕ್ಷಣ ನೆನೆದರೆ ಇಂದಿಗೂ ಕಣ್ಣಾಲೆಗಳು ಒದ್ದೆಯಾಗುತ್ತವೆ. ಅಂದಹಾಗೆ ಅವರ ಮೂರನೇ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಒಂದಷ್ಟು ವಿಡಿಯೋಗಳು ವೈರಲ್‌ ಆಗಿವೆ. ಪುನೀತ್‌ ರಾಜ್‌ಕುಮಾರ್‌ ಕೊನೆ ಕ್ಷಣದ ವಿಡಿಯೋ ಸಹ ವೈರಲ್ ಆಗುತ್ತಿದೆ.

 

ಪುನೀತ್ ಅವರು ತೀರಿಕೊಳ್ಳುವ ಹಿಂದಿನ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಬರ್ತ್ ಡೇ ಪಾರ್ಟಿಯಿತ್ತು. ಈ ಪಾರ್ಟಿಯಲ್ಲಿ ಚಿತ್ರರಂಗದ ಸ್ನೇಹಿತರೆಲ್ಲರೂ ಬಂದಿದ್ದರು. ಅವರ ಜೊತೆ ಪುನೀತ್ ಕೂಡಾ ಭಾಗಿಯಾಗಿದ್ದರು. ಹಾಡು, ಹರಟೆ ಹೊಡೆಯುತ್ತಾ ಜಾಲಿಯಾಗಿ ಕಾಲ ಕಳೆದಿದ್ದರು. ಅಲ್ಲಿ ಪುನೀತ್‌ ಇರುವ ವಿಡಿಯೋ ವೈರಲ್‌ ಆಗುತ್ತಿದೆ. ಈ ಸಂದರ್ಭದಲ್ಲಿಯೂ ಪುನೀತ್‌ ಎಲ್ಲರ ಮೊಗದಲ್ಲಿ ನಗು ಅರಳಿಸಿದ್ದರು. ಪುನೀತ್‌ ಕೊನೆಯ ವಿಡಿಯೋದಲ್ಲಿ ಹಾಡೊಂದನ್ನು ಹಾಡಿ ರಂಜಿಸಿದ್ದರು.

ಆದರೆ ಆ ದಿನ ಪಾರ್ಟಿಯಿಂದ ಪುನೀತ್ ಇತರರಿಗಿಂತ ಬೇಗ ಮನೆಗೆ ಹೊರಡಲು ಅವಸರ ಮಾಡಿದ್ದರು. ಯಾಕೆಂದರೆ ಪ್ರತಿನಿತ್ಯ ಊಟ ಮುಗಿಸಿದ ಬಳಿಕ ಮಗಳ ಜೊತೆ ಒಂದು ವಾಕಿಂಗ್ ಮಾಡುವುದು ಅಪ್ಪು ನಿತ್ಯದ ದಿನಚರಿಗಳಲ್ಲೊಂದಾಗಿತ್ತು. ಅಂದೂ ಕೂಡಾ ಮಗಳ ಜೊತೆ ವಾಕಿಂಗ್ ಮಾಡಬೇಕು ಎಂದು ಅಪ್ಪು ಬೇಗನೇ ಹೊರಟಿದ್ದರು. ಯಾಕೆಂದರೆ ಪ್ರತಿನಿತ್ಯ ಊಟ ಮುಗಿಸಿದ ಬಳಿಕ ಮಗಳ ಜೊತೆ ಒಂದು ವಾಕಿಂಗ್ ಮಾಡುವುದು ಅಪ್ಪು ನಿತ್ಯದ ದಿನಚರಿಗಳಲ್ಲೊಂದಾಗಿತ್ತು. ಅಂದೂ ಕೂಡಾ ಮಗಳ ಜೊತೆ ವಾಕಿಂಗ್ ಮಾಡಬೇಕು ಎಂದು ಅಪ್ಪು ಬೇಗನೇ ಹೊರಟಿದ್ದರು.

ತಮ್ಮ ದೈನಂದಿನ ದಿನಚರಿ ಮಿಸ್ ಆಗಬಾರದು ಎಂದು ಅಪ್ಪು ಬೇಗ ಹೊರಟಿದ್ದರು. ತಮ್ಮ ಮಕ್ಕಳನ್ನು ಪುನೀತ್ ಅಷ್ಟು ಅಕ್ಕರೆ ಮಾಡುತ್ತಿದ್ದರು. ಹಿರಿಯ ಮಗಳು ಅಮೆರಿಕಾದಲ್ಲಿದ್ದ ಕಾರಣ, ಕಿರಿಯ ಮಗಳ ಜೊತೆ ಅಪ್ಪು ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಮರುದಿನವೇ ಅವರ ಕೊನೆಯ ದಿನ ಎಂದು ಯಾರೂ ಊಹೆ ಕೂಡಾ ಮಾಡಲು ಸಾಧ್ಯವಾಗಲಿಲ್ಲ.

Leave A Reply

Your email address will not be published.