Harish Poonja: ಪೇಜಾವರ ಶ್ರೀಗಳ ಕುರಿತು ನಾಲಗೆ ಹರಿಬಿಟ್ಟ ಬಿ ಕೆ ಹರಿಪ್ರಸಾದ್ ವಿರುದ್ಧ ಹರಿಹಾಯ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ !!

Harish Poonja: ಇತ್ತೀಚೆಗೆ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ (MLC BK Hariprasad) ಅವರು ಪೇಜಾವರ ಶ್ರೀಗಳಿಗೆ (Pejavara Shree) ಪುಡಿ ರಾಜಕಾರಣಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಚಾರ ಇದೀಗ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕರು, ಹಿಂದೂ ಮುಖಂಡರು ಹರಿಪ್ರಸಾದ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಂತೆಯೇ ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ(Harish poonja) ಕೂಡ ಹರಿಪ್ರಸಾದ್ ವಿರುದ್ಧ ಹರಿಹಾಯ್ದಿದ್ದಾರೆ.
ಹೌದು, ಮಂಗಳೂರಿನಲ್ಲಿ ಮಾದ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಬೆಳ್ತಂಗಡಿ ಶಾಸಕರು,ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ವಿಶೇಷ ಗೌರವ ಇದೆ. ಗುರುಗಳನ್ನು ನಿಂದಿಸಿ ಹಿಂದೂಗಳ ಭಾವನೆಗೆ ಘಾಸಿ ಮಾಡಿದ್ದಾರೆ ಎಂದು ಹರಿಪ್ರಸಾದ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಪೇಜಾವರಶ್ರೀಗಳ ವಿರುದ್ಧ ಹೇಳಿದಂತೆ ಬಿಕೆ ಹರಿಪ್ರಸಾದ್‌ಗೆ ತಾಕತ್ ಇದ್ರೆ ಮುಸಲ್ಮಾನ ಧರ್ಮ ಗುರುಗಳು, ಕ್ರೈಸ್ತ ಪಾದ್ರಿಗಳ ಬಗ್ಗೆ ಅವಹೇಳನ ಮಾಡಲಿ ನೋಡೋಣ, ಸೌಮ್ಯ ಸ್ವಭಾವದ ಹಿಂದೂ ಧಾರ್ಮಿಕ ಗುರುಗಳ ಮೇಲೆ ಏನು ಮಾತಾಡಿದ್ರೂ ನಡೆಯುತ್ತೆ ಎಂದುಕೊಂಡಿದ್ದೀರ? ಎಂದು ಪ್ರಶ್ನಿಸಿದರು.
ಅಲ್ಲದೆ ಈ ಹಿಂದೆ ಹರಿಪ್ರಸಾದ್ ಅವರು ಹಿಂದೂ ಮತ್ತು ಮುಸಲ್ಮಾನರ ಡಿಎನ್‌ಎ ಒಂದೇ ಆಗಿದೆ ಎಂದು ಹೇಳಿದ್ರು. ಇದನ್ನ ನಾವು ಒಪ್ಪುವುದಿಲ್ಲ ಹಿಂದೂಗಳ ಡಿಎನ್‌ಎ ರಾಮನ ಹಾಗೂ ಕೃಷ್ಣನ ಡಿಎನ್‌ಎ ಆಗಿದೆ. ನಿಮ್ಮ ಡಿಎನ್‌ಎ ಯಾವುದು ಮೊದಲು ಚೆಕ್ ಮಾಡಿಸಿಕೊಳ್ಳಿ. ನಿಮ್ಮದು ಹಿಂದೂ ಡಿಎನ್‌ಎ ಆಗಿದ್ರೆ ಹಿಂದೂ ಸ್ವಾಮೀಜಿಗಳ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ. ಕೇಸರಿಯ, ಕಾವಿಯ ಬಗ್ಗೆ ಹರಿಪ್ರಸಾದ್‌ಗೆ ಯಾಕೆ ಗೌರವ ಇಲ್ಲ? ಅವರ ಡಿಎನ್‌ಎಯಲ್ಲಿ ಕೇಸರಿ ಇದೆಯಾ?, ಹಸಿರು ಬಣ್ಣ ಇದೆಯೇ? ಅನ್ನೋದನ್ನ ನೋಡಬೇಕು ಅಥವಾ ಬಿಳಿ ಇದೆಯಾ ಎಂದು ನೋಡಬೇಕು. ಮೊದಲು ಅವರ ಡಿಎನ್‌ಎ ಟೆಸ್ಟ್ ಮಾಡಿಸಬೇಕು ಎಂದು ತರಾಟೆ ತೆಗೆದುಕೊಂಡರು.
ಮುಂದುವರೆದು ಮಾತನಾಡಿದ ಅವರು ‘ಶ್ರೀಗಳು ಜಾತ್ಯಾತೀತ ಭಾರತದಲ್ಲಿ ಜಾತಿಗಣತಿ ಅಗತ್ಯವೇನಿದೆ ಎಂದು ಪ್ರಶ್ನಿಸಿರುವುದರಲ್ಲಿ ತಪ್ಪೇನಿದೆ? ಪೇಜಾವರಶ್ರೀಗಳು ಎಲ್ಲ ಜಾತಿಗಳನ್ನು ಮೀರಿ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂತಹ ಸ್ವಾಮೀಜಿಗಳಿಗೆ ಪುಡಿ ರಾಜಕಾರಣಿ ಅಂತೀರಾ? ಪುಡಿ ರಾಜಕಾರಣಿ ಯಾರು ಎಂದು ಮಲ್ಲೇಶ್ವರಂನ ಗಲ್ಲಿ ಗಲ್ಲಿಗೆ ಗೊತ್ತಿದೆ’ ಎಂದು ಹರಿಹಾಯ್ದಿದ್ದಾರೆ.