Vastu Tips: ನಿಮಗಿದು ಗೊತ್ತಾ?! ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಸಿಕ್ಕರೆ ಶುಭಶಕುನ ಮತ್ತು ಅಪಶಕುನ ಎನ್ನಲಾಗುತ್ತೆ!
Vastu Tips: ಹಿಂದೂ ಧರ್ಮದಲ್ಲಿ ಶಕುನ-ಅಪಶಕುನಗಳನ್ನು ಹೆಚ್ಚಾಗಿ ನಂಬಲಾಗುತ್ತದೆ. ಮುಖ್ಯವಾಗಿ ಮನೆ ಮುಂದೆ ಕೆಲವು ಪ್ರಾಣಿಗಳನ್ನು ಕಾಣುವುದನ್ನು ಶುಭ ಸಂಕೇತ ಎಂದು ಹೇಳಲಾಗುತ್ತದೆ. ಹೌದು, ವಾಸ್ತು ಪ್ರಕಾರವೂ (Vastu Tips) ಕೆಲವು ಪ್ರಾಣಿಗಳು ದಾರಿಯಲ್ಲಿ ನಮಗೆ ಸಿಕ್ಕರೆ ಶುಭ ಶಕುನ ಎಂದೇ ಹೇಳಲಾಗುತ್ತದೆ. ಕೆಲವೊಂದು ನಂಬಿಕೆಗಳು ಎಷ್ಟು ಸರಿಯೋ ಗೊತ್ತಿಲ್ಲ. ಆದರೆ ಬಹುತೇಕರು ನಂಬುತ್ತಾರೆ.
ಮುಖ್ಯವಾಗಿ ಈ ಶುಭ ಮತ್ತು ಅಶುಭ ಶಕುನದ ನಂಬಿಕೆಯನ್ನು ನಾರದ ಪುರಾಣವು ಉಲ್ಲೇಖಿಸಿದೆ. ಅಂತಹ ಪ್ರಾಣಿಗಳು ಯಾವುದು, ಅವುಗಳು ನಮಗೆ ಅದೃಷ್ಟ ವನ್ನು ತರುತ್ತದೋ ಅಥವಾ ದುರಾದೃಷ್ಟವನ್ನೋ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಕಾಗೆಗಳು
ಕಾಗೆ ದುರದೃಷ್ಟ ತರುತ್ತದೆ ಅಥವಾ ಸಾವಿನ ಸೂಚನೆ ಎನ್ನಲಾಗುತ್ತದೆ. ಇನ್ನು ಕೆಲವರು ಕಾಗೆಗಳು ಅದೃಷ್ಟದ ಸಂದೇಶವಾಹಕಗಳು ಎಂದು ನಂಬುತ್ತಾರೆ.
ಮುಂಗುಸಿ:
ದಾರಿಯಲ್ಲಿ ಮುಂಗುಸಿ ಸಿಕ್ಕರೆ ಮುಂದೆ ಸಾಗಬಾದರು. ಅಂದರೆ ಪ್ರತಿಸ್ಪರ್ಧಿಗಳು ನಮ್ಮ ಕಾರ್ಯಗಳಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬುದರ ಸಂಕೇತ.
ಹಸುಗಳ ಹಿಂಡು:
ಹಸುಗಳ ಹಿಂಡು ಮಾರ್ಗಕ್ಕೆ ಅಡ್ಡ ಬಂದರೆ ಅವುಗಳು ಹೋಗುವ ತನಕ ಕಾಯಬೇಕು. ಯಾಕೆಂದರೆ ಮುಂಬರುವ ಎದುರಾಗುವ ತೊಂದರೆಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗುತ್ತದೆ.
ನಾಯಿ:
ಮನೆಯಿಂದ ಹೊರಡುವಾಗ ಮಣ್ಣು ಮೆತ್ತಿಕೊಂಡಿರುವ ನಾಯಿಯನ್ನು ನೋಡುವುದು ಅಶುಭ ಲಕ್ಷಣ ಎಂದು ಹೇಳಲಾಗುತ್ತದೆ.
ಕಪ್ಪು ಬೆಕ್ಕು:
ಕಪ್ಪು ಬೆಕ್ಕುಗಳನ್ನು ಬಹುತೇಕರು ದುರದೃಷ್ಟ ಎನ್ನುತ್ತಾರೆ. ಅವು ನಮ್ಮ ದಾರಿಯನ್ನು ದಾಟಿದರೆ ಅದರಿಂದ ಮುಂದೆ ನಾವು ಮಾಡಬೇಕಿರುವ ಕೆಲಸ ಆಗುವುದಿಲ್ಲ ಎನ್ನಲಾಗುತ್ತದೆ.
ಜೇಡ:
ಜೇಡವನ್ನು ಗುರುತಿಸುವುದು ಅದೃಷ್ಟ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಿದ್ದರೆ ಇನ್ನು ಕೆಲವರು ಇದು ದುರದೃಷ್ಟ ಮತ್ತು ಮೋಸವನ್ನು ಜಾಲವನ್ನು ಸೂಚಿಸುತ್ತದೆ ಎನ್ನುತ್ತಾರೆ.
ಲೇಡಿಬಗ್:
ಲೇಡಿಬಗ್ ಎಂದು ಕರೆಯಲ್ಪಡುವ ಚಿಕ್ಕ ಕೀಟ ಅದೃಷ್ಟ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಗೂಬೆ:
ಗೂಬೆಗಳನ್ನು ಮನೆಯಲ್ಲಿ ಸಾಕುವುದಿಲ್ಲ ಯಾಕೆಂದರೆ ಅನೇಕ ಸಂಸ್ಕೃತಿಗಳಲ್ಲಿ ಗೂಬೆಗಳನ್ನು ಸಾಮಾನ್ಯವಾಗಿ ದುರದೃಷ್ಟದ ಶಕುನವೆಂದು ಪರಿಗಣಿಸಲಾಗುತ್ತದೆ. ಅವುಗಳ ಕೂಗು ಸಾವು ಅಥವಾ ದುರದೃಷ್ಟವನ್ನು ಸೂಚಿಸುತ್ತವೆ ಎಂದು ಭಾವಿಸಲಾಗಿದೆ.
ನವಿಲು:
ನವಿಲುಗಳು ಗರಿ ಬಿಚ್ಚಿ ಕುಣಿಯುವುದನ್ನು ನೋಡಿದರೆ ಅದೃಷ್ಟ. ಇನ್ನು ಅವುಗಳ ಗರಿಗಳನ್ನು ಮನೆಯಲ್ಲಿ ತಂದು ಇರಿಸಿದರೆ ಕೆಟ್ಟ ಶಕ್ತಿಗಳು ದೂರವಾಗಿ, ನಮ್ಮನ್ನು ರಕ್ಷಿಸುತ್ತವೆ.
ಮೊಲಗಳು:
ಮೊಲಗಳು ಸಾಮಾನ್ಯವಾಗಿ ಅದೃಷ್ಟದ ಸಂಕೇತ ಎಂದು ಭಾವಿಸಲಾಗುತ್ತದೆ. ಅನೇಕ ಸಂಸ್ಕೃತಿಗಳಲ್ಲಿ, ಮೊಲವನ್ನು ನೋಡುವುದು ಫಲವತ್ತತೆ, ಸಮೃದ್ಧಿಯನ್ನು ಸೂಚಿಸುತ್ತದೆ.
no prescription ventolin inhaler: Buy Ventolin inhaler online – online ventolin
can i buy ventolin over the counter in canada
lasix furosemide: buy furosemide – furosemide